ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗದ್ದಿಗೌಡರ ಗೆಲುವು: ಹಳ್ಳಿಗಳಲ್ಲಿ ಸಂಭ್ರಮ

Published 5 ಜೂನ್ 2024, 15:14 IST
Last Updated 5 ಜೂನ್ 2024, 15:14 IST
ಅಕ್ಷರ ಗಾತ್ರ

ರಾಂಪುರ: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಐದನೇ ಬಾರಿಗೆ ಜಯ ದಾಖಲಿಸಿದ ಪಿ.ಸಿ.ಗದ್ದಿಗೌಡರ ಗೆಲುವಿಗೆ ಗ್ರಾಮೀಣ ಭಾಗದ ವಿವಿಧ ಹಳ್ಳಿಗಳಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಶಿರೂರ ಪಟ್ಟಣದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ಜಮಾಯಿಸಿ ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.

ನಂತರ ಬಿಜೆಪಿ ಬಾವುಟ ಹಿಡಿದು ಓಣಿಗಳಲ್ಲಿ ಸಂಚರಿಸಿದ ಕಾರ್ಯಕರ್ತರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದರು. ಮುಖಂಡರಾದ ಸುರೇಶ ದೇಸಾಯಿ, ಸಿ.ಎಂ.ಪ್ಯಾಟಿಶೆಟ್ಟರ, ರಾಮಣ್ಣ ಕೋಟಿಕಲ್, ರಾಜಶೇಖರ ಅಂಗಡಿ, ಕಲ್ಲಪ್ಪ ಭಗವತಿ, ಶೇಖಪ್ಪ ಮಾಚಾ, ರವಿ ಗಿರಿಜಾ, ಮುತ್ತು ಹಳದೂರ, ಸಿದ್ಲಿಂಗಪ್ಪ ಪಟ್ಟಣಶೆಟ್ಟಿ, ಸಿದ್ದಪ್ಪ ಹಳ್ಳೂರ, ಅರ್ಜುನ ಅಳ್ಳಿ, ನೀಲಪ್ಪ ಬಾರಡ್ಡಿ ಇದ್ದರು.

ಬೆನಕಟ್ಟಿ, ಮನ್ನಿಕಟ್ಟಿ, ಬೇವೂರ, ರಾಂಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಬಿಜೆಪಿ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT