ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ | ಹೆರಿಗೆ ಮಾಡುವ ನಕಲಿ ವೈದ್ಯೆ: ಯಂತ್ರಗಳು ವಶಕ್ಕೆ

Published 18 ಜೂನ್ 2024, 16:23 IST
Last Updated 18 ಜೂನ್ 2024, 16:23 IST
ಅಕ್ಷರ ಗಾತ್ರ

ಜಮಖಂಡಿ (ಬಾಗಲಕೋಟೆ ಜಿಲ್ಲೆ): ನಗರದ ಕುಂಬಾರ ಗಲ್ಲಿಯಲ್ಲಿ ಅನಧಿಕೃತವಾಗಿ ಹೆರಿಗೆ ಆಸ್ಪತ್ರೆ ನಡೆಸುತ್ತಿದ್ದ ಆರೋಪಿ ಸುರೇಖಾ ಚರಕಿ (62) ಎಂಬುವರ ಮನೆ ಮೇಲೆ ಮಂಗಳವಾರ ದಾಳಿ ನಡೆಸಿದ ಅಧಿಕಾರಿಗಳು ಆರೋಗ್ಯ ತಪಾಸಣಾ ಕೊಠಡಿಗೆ ಬೀಗ ಜಡಿದರು.

‘ಎಸ್ಎಸ್‌ಎಲ್‌ಸಿ ಓದಿರುವ ಸುರೇಖಾ ಚರಕಿ ನಕಲಿ ವೈದ್ಯೆಯಾಗಿದ್ದು, ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡುವ ಖಚಿತ ಸುಳಿವಿನ ಆಧಾರದ ಮೇಲೆ ಡಾ.ಜಿ.ಎಸ್.ಗಲಗಲಿ, ಪಿಎಸ್‌ಐ ನಾಗರಾಜ ಖಿಲಾರಿ ಮತ್ತಿತರರ ಸಹಯೋಗದಲ್ಲಿ ಕಾರ್ಯಾಚರಣೆ ನಡೆಯಿತು’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸುದ್ದಿಗಾರರಿಗೆ ತಿಳಿಸಿದರು.

‘ಗರ್ಭಪಾತ ಮಾಡುವ ಮಾತ್ರೆ, ಔಷಧಿ, ವಿಟಮಿನ್, ನಿದ್ರೆ ಮಾತ್ರೆ, ಸಲಾಯಿನ್, ಸ್ಟೆತಾಸ್ಕೋಪ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕೃಷ್ಣಾ ಮೆಡಿಕಲ್ ಮತ್ತು ವಿಜಯಪುರದಿಂದ ಔಷಧಿಗಳನ್ನು ತರಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು’ ಎಂದರು.

‘ಸ್ಕ್ಯಾನಿಂಗ್‌ ಮಾಡಿಸಲು ಕಳುಹಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಮೊದಲು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಎಷ್ಟು ಜನರಿಗೆ ಚಿಕಿತ್ಸೆ ನೀಡಿದ್ದಾರೆ ಎಂಬುದು ದಾಖಲೆಪತ್ರಗಳಿಲ್ಲ. ಅವರ ಅಕ್ರಮ ಕಾರ್ಯಕ್ಕೆ ಸಹಕಾರ ನೀಡಿದವರನ್ನು ವಿಚಾರಣೆ ಮಾಡಲಾಗುವುದು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದರು.

ಜಮಖಂಡಿ ನಗರದ ಕುಂಬಾರ ಗಲ್ಲಿಯಲ್ಲಿನ ನಕಲಿ ವೈದ್ಯೆಯ ಮನೆಗೆ ಎಸಿ ಸಂತೋಷ ಕಾಮಗೌಡ ಟಿಎಚ್‌ಓ ಜಿ.ಎಸ್.ಗಲಗಲಿ ಸಿಪಿಐ ಮಲ್ಲಪ್ಪ ಮಡ್ಡಿ ಪಿಎಸ್‌ಐ ಎನ್.ಆರ್.ಖಿಲಾರಿ ದಾಳಿ ನಡೆಸಿದರು
ಜಮಖಂಡಿ ನಗರದ ಕುಂಬಾರ ಗಲ್ಲಿಯಲ್ಲಿನ ನಕಲಿ ವೈದ್ಯೆಯ ಮನೆಗೆ ಎಸಿ ಸಂತೋಷ ಕಾಮಗೌಡ ಟಿಎಚ್‌ಓ ಜಿ.ಎಸ್.ಗಲಗಲಿ ಸಿಪಿಐ ಮಲ್ಲಪ್ಪ ಮಡ್ಡಿ ಪಿಎಸ್‌ಐ ಎನ್.ಆರ್.ಖಿಲಾರಿ ದಾಳಿ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT