ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಕ್ಷಾ ಪಾಲಿಸಿ ಸದುಪಯೋಗ ಪಡೆಯಿರಿ: ಷಣ್ಮುಖ ಶಿರೋಳ

Published 15 ಜೂನ್ 2024, 15:11 IST
Last Updated 15 ಜೂನ್ 2024, 15:11 IST
ಅಕ್ಷರ ಗಾತ್ರ

ಮಹಾಲಿಂಗಪುರ: ‘ವಿಮೆ ಎಂದಾಗ ನಾವು ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ ಎಂಬ ಆತಂಕ ಎಲ್ಲರಲ್ಲೂ ಕಾಡುತ್ತದೆ. ಆದರೆ, ಕಡಿಮೆ ಹಣವನ್ನು ಕಟ್ಟಿ ಅಧಿಕ ಮೊತ್ತದ ವಿಮಾ ಸುರಕ್ಷತೆಯನ್ನು ಅಂಚೆ ಕಚೇರಿಯಿಂದ ಪಡೆಯಬಹುದು. ಗ್ರಾಹಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕಚೇರಿ ಅಧಿಕಾರಿ ಷಣ್ಮುಖ ಶಿರೋಳ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಅಂಚೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಸುರಕ್ಷಾ ಪಾಲಿಸಿ ವಿತರಿಸಿ ಅವರು ಮಾತನಾಡಿದರು.

ಅಂಚೆ ಕಚೇರಿಯ ಸಮೂಹ ಅಪಘಾತ ಸುರಕ್ಷಾ ಪಾಲಿಸಿಯನ್ನು ಖರೀದಿ ಮಾಡಿದರೆ, ಕಡಿಮೆ ಮೊತ್ತದಲ್ಲಿಯೇ ಅಪಘಾತ ವಿಮೆಯನ್ನು ಪಡೆದುಕೊಳ್ಳಬಹುದು. ಕನಿಷ್ಠ 18 ರಿಂದ ಗರಿಷ್ಠ 65 ವರ್ಷದ ಒಳಗಿನವರು ಕೂಡಲೇ ಈ ಪಾಲಿಸಿ ಖಾತೆ ತೆರೆಯಬೇಕು. ಈ ಸುರಕ್ಷೆಯೊಂದಿಗೆ ಅಪಘಾತದಿಂದ ಉಂಟಾಗುವ ದೈಹಿಕ ಹಾಗೂ ಹಣಕಾಸಿನ ಅಡಚಣೆಗಳನ್ನು ಎದುರಿಸಲು ಸನ್ನದ್ಧರಾಗಬಹುದು ಎಂದು ಹೇಳಿದ ಅವರು, ₹ 399 ಹಾಗೂ ₹ 520 ಪಾವತಿ ಮಾಡಬಹುದಾದ ಪಾಲಿಸಿಗಳ ಬಗ್ಗೆ ವಿವರಿಸಿದರು.

ಸುರೇಶ ಕಾಡಾಪುರ, ಶ್ರೀಶೈಲ ಮಿರ್ಜಿ, ಮಹೇಶ ಕೆರೂರ, ಮಹಾವೀರ ಹುಲ್ಲೊಳ್ಳಿ, ರವಿ ತೇರದಾಳ, ಶ್ವೇತಾ ಬಿರಾದಾರ, ಸಾವಿತ್ರಿ ಮಠದ, ಕಿರಣ ಬಾಳಿಕಾಯಿ, ಷಣ್ಮುಖ ಕೋಲಾರ, ಶ್ವೇತಾ ರಂಜಣಗಿ, ಸ್ವಾತಿ ರಂಜಣಗಿ, ಮಹಾಲಿಂಗಪ್ಪ ಗೋಲಭಾವಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT