ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಬಂಗಾರದ ಪದಕ ಪಡೆದ ವಿದ್ಯಾರ್ಥಿಗಳು

Published 22 ಫೆಬ್ರುವರಿ 2024, 15:57 IST
Last Updated 22 ಫೆಬ್ರುವರಿ 2024, 15:57 IST
ಅಕ್ಷರ ಗಾತ್ರ

ಜಮಖಂಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ವಿಜಯಪುರ ಅಕ್ಕಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ನಡೆದ 17ನೇ ಅಂತರ ಕಾಲೇಜುಗಳ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.

ಬಿಕಾಂ ವಿಭಾಗದಲ್ಲಿ 500 ಮೀ. ಹಾಗೂ 1500 ಮೀ. ಓಟದ ಸ್ಪರ್ಧೆಯಲ್ಲಿ ರೇಷ್ಮಾ ಬಾರಿಗಡ್ಡಿ, ಎತ್ತರ ಜಿಗಿತದಲ್ಲಿ ಶ್ರೀದೇವಿ ಕಡಪಟ್ಟಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾರೆ.

ಬಿಸಿಎ ವಿಭಾಗದಲ್ಲಿ 100 ಮೀ. ಅಡೆತಡೆ ಓಟದ ಸ್ಪರ್ಧೆಯಲ್ಲಿ ಕೀರ್ತಿ ಅಂಗಡಿ, ಉದ್ದ ಜೀಗಿತದಲ್ಲಿ ಶ್ರೀದೇವಿ ಕಡಪಟ್ಟಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ.

ಬಿಎ ವಿಭಾಗದಲ್ಲಿ 20 ಕಿ.ಮೀ ನಡಿಗೆಯಲ್ಲಿ ಅನಿತಾ ಸವದಿ, ಜಾವೆಲಿನ ಥ್ರೋ ದಲ್ಲಿ ಅರ್ಪಿತಾ ಪ್ರಾರ್ಥನಾಶೆಟ್ಟಿ, ಜ್ಯೋತಿ ಬಬಲೇಶ್ವರ ಕ್ರಮವಾಗಿ ನಾಲ್ಕನೇ ಸ್ಥಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಡಾ.ಜೆ.ಪಿ.ದೊಡಮನಿ, ಕ್ರೀಡಾ ವಿಭಾಗದ ಪ್ರೊ.ಎಸ್.ಕೆ.ಡೇಂಬರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT