ಬಾಗಲಕೋಟೆ: ಎಚ್ಐವಿ/ಏಡ್ಸ್ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರಾಂದೋಲನ ಅಂಗವಾಗಿ ಹಮ್ಮಿಕೊಂಡಿದ್ದ 5 ಕಿ.ಮೀ ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಸದಾಶಿವ ಅಡಿಹುಡಿ, ಮಹಿಳಾ ವಿಭಾಗದಲ್ಲಿ ಮಹಾಲಕ್ಷ್ಮಿ ಬಸಕಳಿ ಪ್ರಥಮ ಸ್ಥಾನ ಪಡೆದರು.
ಪುರುಷರ ವಿಭಾಗ: ಸದಾಶಿವ ಅಡಿಹುಡಿ (ಪ್ರಥಮ), ಮಂಜುನಾಥ ಬೇಲೂರಪ್ಪನವರ (ದ್ವಿತೀಯ), ನೀಲಪ್ಪ ಪಟ್ಟೇದ (ತೃತೀಯ) ಹಾಗೂ ಹಣಮಂತ ಆಬಾನಿ, ಸುರೇಶ ತೆಗ್ಗಿ, ಬಸವರಾಜ ದಿವಿಟರ, ಮಾಳೇಶ ಕರೋಶಿ (ಸಮಾಧಾನಕರ) ಬಹುಮಾನ ಪಡೆದರು.
ಮಹಿಳಾ ವಿಭಾಗ: ಮಹಾಲಕ್ಷ್ಮೀ ಬಸಕಳಿ (ಪ್ರಥಮ) ದೀಪಾ ಸನದಿ (ದ್ವಿತೀಯ) ಅರ್ಪಿತಾ ಪಟ್ಟಣಶೆಟ್ಟಿ (ತೃತೀಯ) ಹಾಗೂ ಮುಕ್ತಾಜಿ ಗುರಿಕಾರ, ಐಶ್ವರ್ಯ ಬೀರಕಬ್ಬಿ. ಪ್ರೇಮಾ ಬಾಗೇವಾಡಿ, ಶರಣವ್ವ ಬಿ. ಪಾಟೀಲ (ಸಮಾಧಾನಕರ) ಬಹುಮಾನ ಪಡೆದರು.
ಮಂಗಳವಾರ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ‘ಎಚ್.ಐ.ವಿ/ ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವಿಕೆಗಾಗಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುವರ್ಣಾ ಕುಲಕರ್ಣಿ ಮಾತನಾಡಿ, ‘ಯುವಕ ಮತ್ತು ಯುವತಿಯರು ಎಚ್‌ಐವಿಯಿಂದ ದೂರವಿರಿ. ಎಚ್ಐವಿ ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಶ್ರಮಿಸೋಣ. ಸತತವಾಗಿ ಎರಡು ತಿಂಗಳ ಕಾಲ ಜನ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಶಶಿಕಲಾ ಶಿನ್ನೂರ, ಉಪ ಆರೋಗ್ಯ ಶಿಕ್ಷಣ ಅಧಿಕಾರಿ ಶ್ರೀಕಾಂತ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಬಿ.ಎಲ್ ಹೊಸಳ್ಳಿ, ನಾಯ್ಕರ್, ಎಂ.ಎಚ್ ಸುಭೇದಾರ, ಎಚ್.ಆರ್.ಮರ್ಧಿ, ಯುವಜನಸೇವೆ ಹಾಗೂ ಕ್ರೀಡಾ ಇಲಾಖೆ ತರಬೇತುದಾರರಾದ ಅನಿತಾ ನಿಂಬರಗಿ ಇದ್ದರು.