ವಸತಿ ನಿಲಯದಲ್ಲಿ ಮೂಲಸೌಕರ್ಯ ಮರೀಚಿಕೆ

7

ವಸತಿ ನಿಲಯದಲ್ಲಿ ಮೂಲಸೌಕರ್ಯ ಮರೀಚಿಕೆ

Published:
Updated:
ಬಾದಾಮಿ ಹೊರವಲಯದ ಮೆಟ್ತಿಕ್ ಪೂರ್ವ ಸರ್ಕಾರಿ ವಸತಿ ನಿಲಯದಲ್ಲಿ ನೀರಿಲ್ಲದ ಸ್ನಾನ ಗೃಹಗಳು

ಬಾದಾಮಿ: ಪಟ್ಟಣ ಹೊರವಲಯದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯ  ಮರೀಚಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಹಾಸಿಗೆ, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಸ್ನಾನ, ಶೌಚಾಲಯಕ್ಕೂ ನೀರಿಲ್ಲದಂತಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ‘ಪ್ರಜಾವಾಣಿ ಪ್ರತಿನಿಧಿ’ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳು ಕಂಡು ಬಂದವು.

ಬಿಸಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಹೊರಗೆ ತಣ್ಣೀರು ಸ್ನಾನ ಮಾಡಬೇಕಿದೆ. ಕಳೆದ ಸಾಲಿನಲ್ಲಿ ನೀಡಿದ್ದ ಬೆಡ್‌ಗಳನ್ನೇ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ‘ಕೊಳವೆ ಬಾವಿ ಕೆಟ್ಟು ಹಲವು ದಿನಗಳಾಗಿವೆ. ಪಕ್ಕದ ರೈತರ ಹೊಲದಿಂದ ತಾತ್ಕಾಲಿಕವಾಗಿ ನೀರು ಪಡೆಯಲಾಗುತ್ತಿದೆ. ಕೂಡಲೇ ಹಾಸ್ಟೆಲ್‌ನಲ್ಲಿನ ಕೊಳವೆ ಬಾವಿ ಹಾಗೂ ಸೋಲಾರ್‌ ದುರಸ್ತಿ ಮಾಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಹಾಸ್ಟೆಲ್‌ ಆವರಣದಲ್ಲಿನ ಕೊಳವೆ ಬಾವಿ ಬತ್ತಿದೆ. ಹೊಸ ಕೊಳವೆ ಬಾವಿ ಕೊರೆಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದೇವೆ. ಹೊಸ ಗಾದಿ(ಹಾಸಿಗೆ)ಗೂ ಬೆಂಗಳೂರಿಗೆ ಪ್ರಸ್ತಾವ ಕಳುಹಿಸಲಾಗಿದೆ. ಬಂದ ತಕ್ಷಣವೇ ಮಕ್ಕಳಿಗೆ ವಿತರಿಸಲಾಗುವುದು ಎಂದು ವಸತಿ ನಿಲಯದ ಮೇಲ್ವಿಚಾರಕ ಐ.ಎಸ್.ಮಠಪತಿ ತಿಳಿಸಿದರು.

 ಹೊಸ ಕೊಳವೆ ಬಾವಿ ಕೊರೆಸಲು ತಾಲ್ಲೂಕು ಪಂಚಾಯ್ತಿ ಕ್ರಿಯಾಯೋಜನೆಯಲ್ಲಿ ಸೆರಿಸಲಾಗಿದೆ. ಅನುದಾನ ಮಂಜೂರಾದ ಕೂಡಲೇ ಕೊಳವೆ ಬಾವಿಯನ್ನು ಕೊರೆಸಲಾಗುವುದು
- ಎಚ್.ಎಂ. ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !