ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೂರ | ಅಕ್ರಮ ಗೋ ಸಾಗಣೆ: ಆರೋಪಿ ಪೋಲಿಸರ ವಶಕ್ಕೆ

Published 16 ಜೂನ್ 2024, 13:42 IST
Last Updated 16 ಜೂನ್ 2024, 13:42 IST
ಅಕ್ಷರ ಗಾತ್ರ

ಕೆರೂರ: ಅಕ್ರಮವಾಗಿ‌ ಗೋ ಸಾಗಣೆ ಮಾಡುತ್ತಿದ್ದ ಎರಡು ಎತ್ತು, ವಾಹನ ಸಹಿತ ಆರೋಪಿಯನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಮಹ್ಮದರಫೀಕ್ ಅತ್ತಾರ ಬಂಧಿತ. ಈತ ಪಟ್ಟಣದ ಬಟಕುರ್ಕಿ ಕ್ರಾಸ್ ಹತ್ತಿರ ಶನಿವಾರ ಸಂಜೆ ಬಾದಾಮಿಯಿಂದ ಕೆರೂರ ಕಡೆಗೆ ಅನುಮತಿ ಪತ್ರ ಇಲ್ಲದೇ ಗೋ ಸಾಗಣೆ ಮಾಡುತ್ತಿದ್ದ.

ಈತ ವಾಹನದಲ್ಲಿ ಎತ್ತುಗಳನ್ನು ಒಂದಕ್ಕೊಂದು ತಾಗಿಕೊಂಡು ಹಿಂಸೆಯಾಗುವಂತೆ ಕಟ್ಟಿ ಸಾಗಣೆ ಮಾಡುತ್ತಿದ್ದಾಗ ಪೋಲಿಸರು ಬಂಧಿಸಿದ್ದಾರೆ. ವಶಪಡಿಸಿಕೊಂಡ ಎತ್ತುಗಳನ್ನು ಬಾಗಲಕೋಟೆ ಗೋಶಾಲೆಗೆ ಕಳುಹಿಸಲಾಗಿದೆ.

ಸಿಪಿಐ ಕರೆಯಪ್ಪ ಬನ್ನೆ, ಪಿಎಸ್‌ಐ ಕುಮಾರ ಹಿತ್ತಲಮನಿ, ಸಿಬ್ಬಂದಿಗಳಾದ ಪರಶುರಾಮ ಸೋರಕಟ್ಟಿ, ಹನಮಂತಗೌಡ ಗೌಡರ, ಪ್ರವೀಣ ಗಾಟಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT