ಬನಹಟ್ಟಿಯಲ್ಲಿ ಕಾರು ಹುಣ್ಣಿಮೆಯ ಸಂಭ್ರಮ

7

ಬನಹಟ್ಟಿಯಲ್ಲಿ ಕಾರು ಹುಣ್ಣಿಮೆಯ ಸಂಭ್ರಮ

Published:
Updated:
ಬನಹಟ್ಟಿಯ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಬಸವಣ್ಣನ ಹೊಸೂರ ಗ್ರಾಮದ ಒಂದೇ ಕುಟುಂಬದ ಸದಸ್ಯರು ಬಸವಣ್ಣನ ವಿಗ್ರಹಗಳನ್ನು ಮಾಡುತ್ತಿರುವುದು.

ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾರು ಹುಣ್ಣಿಮೆ ಅಂಗವಾಗಿ ಬಸವಣ್ಣನ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಸ್ಥಳೀಯ ಹನುಮಾನ್‌ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ 30ಕ್ಕೂ ಹೆಚ್ಚು ಕುಂಬಾರರು ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡಿದರು.

ಹಬ್ಬಗಳನ್ನು ಕರೆತರುವ ಕಾರು ಹುಣ್ಣಿಮೆ ಕನ್ನಡದ ಮೊದಲ ಹಬ್ಬ. ಈ ಸಂದರ್ಭದಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಮನೆಗೆ ತಂದು ಪೂಜಿಸುವ ಜೊತೆಗೆ ಮಣ್ಣಿಗೂ ಪೂಜೆ ಸಲ್ಲಿಸುವ ಸಂಪ್ರದಾಯ ಬಹು ಹಿಂದಿನಿಂದಲೂ ನಡೆದು ಬಂದಿದೆ.

ರೈತರಿಗೆ ಮುಖ್ಯವಾಗಿ ಮಣ್ಣು ಬೇಕು. ಆದ್ದರಿಂದ ಒಂದು ವರ್ಷದಲ್ಲಿ ಒಟ್ಟು ಐದು ಬಾರಿ ರೈತರು, ಮಣ್ಣಿನ ಪೂಜೆ ಮಾಡುತ್ತಾರೆ. ಮೊದಲು ಕಾರು ಹುಣ್ಣಿಮೆ, ಗುಳ್ಳವ್ವ, ನಾಗ ಪಂಚಮಿ, ಗಣಪತಿ ಹಬ್ಬ ಹಾಗೂ ಕೊನೆಯದಾಗಿ ಗೌರಿ ಇಲ್ಲವೆ ಸೀಗೆ ಹಣ್ಣಿಮೆ ದಿನ ಮಣ್ಣಿನಿಂದ ಮಾಡಿದ ಶೀಗವ್ವಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.

ಕೃಷಿ ಚಟುವಟಿಕೆಗೆ ಅಗತ್ಯವಾಗಿರುವ ಎತ್ತುಗಳನ್ನು ಸಿಂಗರಿಸಿ, ಪೂಜಿಸಲಾಗುತ್ತದೆ. ಎತ್ತುಗಳು ಇಲ್ಲದಿರುವವರು ಕುಂಬಾರರ ಬಳಿ ಮಣ್ಣಿನ ಮೂರ್ತಿಗಳನ್ನು ತಂದು ಪೂಜಿಸುತ್ತಾರೆ.

ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ 60 ವಯಸ್ಸಿನ ಈರಪ್ಪ ಕುಂಬಾರ ಅವರು ಮಣ್ಣಿನ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಗಮನ ಸೆಳೆಯಿತು. ಬಸವಣ್ಣನ ಮೂರ್ತಿಗಳು ಅಂದಾಜು ₹30ರಿಂದ 100 ವರೆಗೆ ಮಾರಾಟ ಮಡಲಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !