ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಿಲ್‌ ವಿಜಯೋತ್ಸವ: ಮಾಜಿ ಸೈನಿಕರಿಗೆ ಗೌರವ

Published 26 ಜುಲೈ 2023, 13:04 IST
Last Updated 26 ಜುಲೈ 2023, 13:04 IST
ಅಕ್ಷರ ಗಾತ್ರ

ಮಹಾಲಿಂಗಪುರ: ಪಟ್ಟಣದ ಕೆ.ಎಲ್.ಇ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆರು ಜನ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಮಾಜಿ ಯೋಧ ಶಿವಾನಂದ ಪರಪ್ಪನವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡರು.

ಮಾಜಿ ಸೈನಿಕ ಮಹಾಂತೇಶ ಅಂಗಡಿ ಮಾತನಾಡಿ, ಸೈನ್ಯ ಸೇರುವವರು ಬಲಶಾಲಿಗಳು, ಧೈರ್ಯವಂತರು ಹಾಗೂ ದೇಶಾಭಿಮಾನಿಗಳು. ಇದು ಮಧ್ಯಮ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದು, ಎಲ್ಲ ವರ್ಗದ ಯುವಕರೂ ಸೈನ್ಯ ಸೇರಬೇಕು. ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಇರಬೇಕು’ ಎಂದರು.

ಮಾಜಿ ಸೈನಿಕ ಬಸಲಿಂಗ ಗಾಣಿಗೇರ ಮಾತನಾಡಿದರು. ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕರಾದ ಐ.ಜಿ ಚಿಂದಿ, ಹನುಮಂತ ಕುರಿ, ಉಪನ್ಯಾಸಕ ಸುಭಾಷ ಮೂಸಿ, ಬೋರವ್ವಾ ಸೊಂಡಿ, ನಿರ್ಮಲಾ ಫಕೀರಪುರ, ಉಮೇಶ ಹಾದಿಮನಿ ಇದ್ದರು.

ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ನೃತ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT