ಕೆರೂರ: ಇನ್ನೇನು ಅಧಿಕಾರ ಸಿಗುತ್ತೂ ಇಲ್ಲೂ ಎಂಬ ಜಿಜ್ಞಾಸೆಯಲ್ಲಿ ಕಾಲ ದೂಕುತ್ತಿರುವ ಸದಸ್ಯರಲ್ಲಿ ಮತ್ತೆ ಅಧಿಕಾರದ ಆಸೆ ಚಿಗುರಿದೆ. ಇಲ್ಲಿಯ ಪಟ್ಟಣ ಪಂಚಾಯಿತಿ ಅಧಿಕಾರ ಕಾಂಗ್ರೆಸಗೆ ಬಲು ಕಷ್ಟವಿದ್ದು ಕಮಲ ಕಲಿಗಳಿಗೆ ಸುಲಭ ದಾರಿ ಸದ್ಬಳಿಕೆ ಕಸರತ್ತು ನಡೆಸಿದೆ.
ಬಹುದಿನಗಳಿಂದ ನೆನಗುದಿಗೆ ಬಿದ್ದಿದ ಪಟ್ಟಣ ಪಂಚಾಯತ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಒಂದೂವರೆ ವರ್ಷದಿಂದ ಅಧಿಕಾರವಿಲ್ಲದೆ ಬರಿಗೈಲಿದ್ದ ಪುರ ಪ್ರತಿನಿಧಿಗಳ ಇಚ್ಚಾಸೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿ
ಇಲ್ಲಿಯ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ " ಸಾಮಾನ್ಯ ವರ್ಗ " ಮೀಸಲಾಗಿದೆ.ಕಾಂಗ್ರೆಸ್ ಬಿಜೆಪಿ ಸದಸ್ಯರಲ್ಲಿ ಗುಂಪು ಚರ್ಚೆಗಳಿಗೆ ಇಂಬು ನೀಡಿದ್ದು ನಾನೂ ಆಕಾಂಕ್ಷಿ ಎಂದು ಹಕ್ಕೋತ್ತಾಯ ಮಂಡಿಸುತ್ತಿರುವದು ಮಾಮೂಲಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಿನ ಪರಿಣಾಮ ಎಲ್ಲರಲ್ಲೂ ಗದ್ದುಗೆ ಪಡೆಯುವ ಹುಮ್ಮಸ್ಸು ಮೂಡಿದೆ.
ಶಾಸಕರಿಗೆ ಅಗ್ನಿಪರೀಕ್ಷೆ
ಹಿಂದಿನ ಶಾಸಕ ಸಿದ್ದರಾಮಯ್ಯರ ಕುಟೀಲ ತಂತ್ರದಿಂದ ಸರಳ ಅಧಿಕಾರಕ್ಕೇರಿದ ಕೆರೂರ ಪಪಂ ಈ ಭಾರಿ ಈಗಿನ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸವಾಲಿನ ಅಗ್ನಿಪರೀಕ್ಷೆ ಎದುರಾಗಿದೆ.
ಹಿಂದಿನ ಅವಧಿಯ ಅಧ್ಯಕ್ಷ ಸ್ಥಾನವು " ಎಸ್ ಟಿ ಮಹಿಳೆಗೆ " ಒಲಿದು ಬಂದಿತ್ತು, ಈ ಬಾರಿ ಅಧ್ಯಕ್ಷ ಸ್ಥಾನದ ಮೀಸಲಾತಿ " ಎಸ್ ಟಿ ಪುರುಷ ಅಥವಾ 2ಎ ಮಹಿಳೆ " ಬರುತ್ತದೆ ಎಂಬ ನೀರಿಕ್ಷೆ ಹುಸಿಯಾಗಿದೆ.
ಪಟ್ಟಣ ಪಂಚಾಯತ 20 ಸದಸ್ಯರ ಬಲದಲ್ಲಿ ಬಿಜೆಪಿ 9,ಕಾಂಗ್ರೆಸ್ 7,ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯರು 3,ಕಾಂಗ್ರೆಸ್ ಬೆಂಬಲಿತ ಓರ್ವ ಪಕ್ಷೇತರಿದ್ದು.
" ಸಾಮಾನ್ಯ ವರ್ಗ " ಮೀಸಲಾತಿಯಾಗಿ ಪ್ರಕಟಣೆಗೊಂಡಿರುವುದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೇಲೆ ಎರಡು ಪಕ್ಷದ ಅಭ್ಯರ್ಥಿಗಳು ಕಣ್ಣಿಟ್ಟಿದ್ದಾರೆ.
ಒಟ್ಟಾರೆ ಎರಡೂ ಪಕ್ಷಗಳ ಬಾಲಾಬಲ ಗಮನಿಸಿದರೆ ಬಿಜೆಪಿಗೆ ಸುಲಭ ಬಹುಮತ ದಕ್ಕುವದು ನಿಶ್ಚಿತವಾಗಿದೆ.
ಆಕಾಂಕ್ಷಿಗಳು ಬಿಜೆಪಿಯಲ್ಲಿ ಹಾಲಿ ಉಪಾಧ್ಯಕ್ಷ ಪ್ರಮೋದ ಪೂಜಾರಮಾಜಿ ಉಪಾಧ್ಯಕ್ಷ ಕುಮಾರ ಐಹೊಳಿಸಿದ್ದಣ್ಣ ಕೊಣ್ಣೂರ ನಿರ್ಮಲಾ ಮದಿಪರಶುರಾಮ ಮಲ್ಲಾಡದಶಂಕರ ಕೆಂದೂಳಿಶೋಭಾ ಛತ್ರಭಾನುಕವಿತಾ ಪ್ರಭಾಕರ ಕಾಂಗ್ರೆಸ್ ನಲ್ಲಿ ಆಶಾಭಿ ಚೋರಗಸ್ತಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.ಕಾಂಗ್ರೆಸ್ ಕೇಲವು ಸದಸ್ಯರು ಪಕ್ಷದ ತಿರ್ಮಾಣಕ್ಕೆ ಬದ್ದರಾಗಿರುತ್ತೇವೆ ಎಂದು ಹೇಳುತ್ತಾರೆ. ಒಟ್ಟಲ್ಲಿ ಅದೃಷ್ಟ ಬಾಗಿಲು ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.