ಕೂಡಲಸಂಗಮ: ಸಮಾಜದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದರೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನೈತಿಕತೆ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಕೂಡಲಸಂಗಮ ಸರ್ಕಾರಿ ಉಕರಣಾಗಾರ ಮತ್ತು ತರಬೇರಿ ಕೇಂದ್ರದ ಉಪನ್ಯಾಸಕ ಶಿವಕುಮಾರ ಕಚ್ಯಾಣಿ ಹೇಳಿದರು.

ಕೂಡಲಸಂಗಮ ಬಸವ ಭಾರತಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಾಯಂಕಾಲ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

’ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದೊಂದಿಗೆ ಸ್ಪರ್ಧಾತ್ಮಕ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮೂಡಲು ಸಾಧ್ಯ. ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡಬೇಕು. ವಿದ್ಯೆ ಏಕಮುಖಿಯಾಗಿರದೇ ಬಹುಮುಖಿಯಾಗಿರಬೇಕು’ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಮುಖಂಡ ಗಂಗಣ್ಣ ಬಾಗೇವಾಡಿ ವಹಿಸಿದರು. ಮುಂಡರಾದ ಎಸ್.ಜಿ.ಪಾಟೀಲ, ಮಲ್ಲಪ್ಪ ದೊಡಮನಿ, ಬಸವರಾಜ ಗೌಡರ, ನಾಗರಾಜ ಹೊಸಗೌಡರ, ಶೇಖಪ್ಪ ದೇಶಿ, ಭಾಗ್ಯವಂತ ಖಜಗಲ್ಲ, ಎಸ್.ಜಿ.ಗೌಡರ, ನೂರಸಾಬ ಅತ್ತಾರ, ಸತ್ಯಪ್ಪ ಸಿಳ್ಳಿಕ್ಯಾತರ, ಮೋಹನಸಿಂಗ ತೋನಸಿಹಾಳ, ಚಂದ್ರು ಭರಮಗೌಡರ, ರಮೇಶ್ ಹುಂಡೇಕರ್, ರಾಕೇಶ್ ಹೊನ್ನಳ್ಳಿ ಇದ್ದರು. ಮುಖ್ಯಗುರು ಮಹಾಂತೇಶ ಎಮ್ಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.