ಗುರುವಾರ , ಸೆಪ್ಟೆಂಬರ್ 23, 2021
21 °C

ಸಸಾಲಟ್ಟಿ: ವ್ಯಾಕ್ಸಿನ್‌ಗಾಗಿ ನೂನುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೇರದಾಳ: ಆರೋಗ್ಯ ಇಲಾಖೆ, ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಸಮೀಪದ ಸಸಾಲಟ್ಟಿಯಲ್ಲಿ`ಲಸಿಕಾ ಮೇಳ' ನಡೆಸಿದ್ದು, ಕೋವಿಡ್ ಲಸಿಕೆ ಪಡೆಯಲು ಆಗಮಿಸಿದ ಸಂದರ್ಭದಲ್ಲಿ ನೂಕುನುಗ್ಗಲಾದ ಘಟನೆ ಸೋಮವಾರ ನಡೆದಿದೆ.

`ಲಸಿಕೆ ಮೇಳ' ನಡೆಸಲು ಸರ್ಕಾರದಿಂದ 250 ಡೋಸ್‌ ಲಸಿಕೆ ಗ್ರಾಮಕ್ಕೆ ಬರುವ ಸುದ್ದಿ ಭಾನುವಾರ ಹರಡಿತ್ತು. ಸೋಮವಾರ ಬೆಳಗಾಗುತ್ತಿದ್ದಂತೆ ಜನರ ದಂಡು ಲಸಿಕಾ ಕೇಂದ್ರದ ಮುಂದೆ ಜಮಾಯಿಸಿತು. ಜನರ ನೂಕಾಟ ಆರಂಭವಾಗಿದೆ.

ಗ್ರಾಮ ಪಂಚಾಯ್ತಿ ಜನರ ಗದ್ದಲ ತಡೆಯುವಲ್ಲಿ ವಿಫಲಾವಾಗಿದ್ದು, ಪೊಲೀಸರು ಬಂದ ನಂತರ ಪರಿಸ್ಥಿತಿ ಹತೋಟಿಗೆ ಬಂತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಲಸಿಕೆ ಪಡೆಯಲು 18 ವಯಸ್ಸಿಗಿಂತ ಮೇಲ್ಪಟ್ಟವರು ಹಾಗೂ 45 ವಯಸ್ಸಿಗಿಂತ ಮೇಲ್ಪಟ್ಟವರು ಸರದಿಯಲ್ಲಿದ್ದರು. ಲಸಿಕಾ ಮೇಳಕ್ಕೆ 500 ಡೋಸ್‌ ಲಸಿಕೆ ಕೊಡಬೇಕೆಂದು ಆದೇಶವಿದ್ದರೂ, ಸಿಬ್ಬಂದಿ ಹಾಗೂ ಲಸಿಕೆ ಕೊರತೆ ಇದ್ದಿದ್ದರಿಂದ ಕೇವಲ 256 ಡೋಸ್‌ ಲಸಿಕೆ ನೀಡಲಾಯಿತು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.

ಲಸಿಕೆ ಪಡೆಯಲು ಮಹಿಳೆಯರು ಸೇರಿದಂತೆ ನಾಲ್ಕು ನೂರರಷ್ಟು ಜನ ಸೇರಿದ್ದು, ಅದರಲ್ಲಿ ಕೆಲವರು ಮೊದಲ ಹಾಗೂ ಕೆಲವರು ಎರಡನೇ ಲಸಿಕೆ ಪಡೆಯಲು ಬಂದಿದ್ದರು. ಲಸಿಕೆ ದೊರೆಯದೆ ಕೆಲವರು ನಿರಾಸೆಯಿಂದ ತೆರಳಬೇಕಾಯಿತು.

ಗ್ರಾಮ ಪಂಚಾಯ್ತಿ ಪಿಡಿಒ ಸಂತೋಷ ಪೂಜೇರಿ, ಆರೋಗ್ಯ ಇಲಾಖೆ ಸಿಬ್ಬಂದಿ ಅಣ್ಣಪ್ಪ ಕೋಳಿ, ಅಂಜನಾ ಹೂಗಾರ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.