ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: 121 ಗಾಂಜಾ ಗಿಡ ಜಪ್ತಿ

Published 15 ಸೆಪ್ಟೆಂಬರ್ 2023, 15:31 IST
Last Updated 15 ಸೆಪ್ಟೆಂಬರ್ 2023, 15:31 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದ ಮನೆ ಆವರಣ ಹಾಗೂ ಕಬ್ಬಿನ ಹೊಲದಲ್ಲಿ ಬೆಳೆದಿದ್ದ 121 ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಡಿವೆಪ್ಪ ಶೇಗುಣಸಿ ಹೊಲದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬೆಳೆದಿದ್ದ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬನಹಟ್ಟಿಯ ಅಬಕಾರಿ ಉಪಆಯುಕ್ತ ಶಿವಲಿಂಗಪ್ಪ, ಉಪ ಅಧೀಕ್ಷಕ ಹನಮಂತ ಬಜಂತ್ರಿ, ನಿರೀಕ್ಷಕರಾದ ಅರುಣ ಜೇವರಗಿ, ಅಜಯ ಉಮದಿ, ಉಪ ನಿರೀಕ್ಷಕ ವೆಂಕಣ್ಣ ಗಿರಡ್ಡಿ, ಸುರೇಂದ್ರ ಆಲಗೂರ, ಶಂಕ್ರಪ್ಪ ಅಂಗಡಿ, ಮಹೇಶ ಇರಳಿ, ಸುಭಾಷ ಕೋಲಕಾರ, ಮಹಾಂತೇಶ ಸೂಳಿಭಾವಿ, ಎನ್.ಎಸ್.ಕಾರಜೋಳ, ಎಂ.ಜಿ.ರೋಡಕರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT