16 ಎಕರೆ ಯಡಿ ಹೊಡೆದ ಎತ್ತುಗಳು!

7
ಕಮತಗಿ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ ಅನ್ನದಾತರು

16 ಎಕರೆ ಯಡಿ ಹೊಡೆದ ಎತ್ತುಗಳು!

Published:
Updated:

ಕಮತಗಿ(ಅಮೀನಗಡ): ಒಂದೇ ದಿನ ಕೇವಲ 9 ಗಂಟೆಗಳಲ್ಲಿ 16 ಎಕರೆ ಯಡಿ ಹೊಡೆಯುವ ಮೂಲಕ ಇಲ್ಲಿನ ರೈತರೊಬ್ಬರ ಎತ್ತುಗಳು ಎಲ್ಲರೂ ಹುಬ್ಬೇರುವಂತೆ ಮಾಡಿವೆ.

ಕಮತಗಿ ಪಟ್ಟಣದ ರೈತ ಹುಚ್ಚಪ್ಪ ಬಸಪ್ಪ ಹುಗ್ಗಿ ಅವರ ಎತ್ತುಗಳು ಈ ಸಾಹಸ ಮಾಡಿವೆ. ಹುಗ್ಗಿ ಅವರು ರಾಮಥಾಳ ಗ್ರಾಮದ ಹತ್ತಿರದ 16 ಎಕರೆ ಜಮೀನಿನಲ್ಲಿ ಹೆಸರು ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ 6ಕ್ಕೆ ಜಮೀನಿನಲ್ಲಿ ಯಡಿ ಹೊಡೆಯಲು ಪ್ರಾರಂಭಿಸಿದರು. ಸಂಜೆ 3ಗಂಟೆ ಹೊತ್ತಿಗೆ 16 ಎಕರೆ ಮುಕ್ತಾಯವಾಗಿದೆ. ನಿರಂತರವಾಗಿ ಗಳೆಯನ್ನು ಹೂಡಲಾಗಿತ್ತು. ಆದರೂ ಎತ್ತುಗಳು ಸುಸ್ತಾಗಿರಲಿಲ್ಲ.

’ಕಿಲಾರಿ ಜಾತಿಗೆ ಸೇರಿದ ಈ ಎತ್ತುಗಳನ್ನು ಪ್ರೀತಿಯಿಂದ ಸಲುಹುತ್ತಿದ್ದೇವೆ. ಕೆಲಸದ ವಿಷಯದಲ್ಲಿ ಚೆನ್ನಾಗಿವೆ. ಇವೊತ್ತಿನ ಕೆಲಸ ಖುಷಿ ತಂದಿದೆ’ ಎಂದು ಹುಗ್ಗಿ ಹೇಳಿದರು. ಯಡಿ ಹೊಡೆಯುವ ಕೆಲಸದಲ್ಲಿ ಶಿವಪ್ಪ ಹುಚ್ಚಪ್ಪ ಹುಗ್ಗಿ, ಬಸವರಾಜ ಹುಚ್ಚಪ್ಪ ಹುಗ್ಗಿ, ರಮೇಶ ಜಗ್ಗಲ, ಕರಿಯಪ್ಪ ಹುಚ್ಚಪ್ಪ ಹುಗ್ಗಿ ನೆರವಾಗಿದ್ದರು. ಎತ್ತುಗಳ ಈ ಸಾಧನೆಯಿಂದ ಜನರು ಖುಷಿಪಟ್ಟರು. ಗುಲಾಲ ಹಚ್ಚಿ, ಹೂವಿನ ಹಾರ ಹಾಕಿ ಸಿಂಗರಿಸಿ ಕರಡಿ ಮಜಲುಗಳೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು. 

ಶಿ.ಗು.ಹಿರೇಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !