ಬಾಗಲಕೋಟೆ: ಜ್ಞಾನ ವಿನಿಮಯ, ಕೌಶಲ ಅಭಿವೃದ್ಧಿಯಲ್ಲಿ ಸಂಶೋಧನೆಗಳು ಮುಖ್ಯವಾಗಿದ್ದು, ಸಮಾಜದ ಏಳಿಗೆಗೆ ಅಧ್ಯಯನವೇ ಮುನ್ನುಡಿಯಾಗಿದೆ ಎಂದು ಬೆಂಗಳೂರಿನ ಲಿವನ್ ಬಯೋಲಾಬ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ ಎನ್.ಜಿ ಹೇಳಿದರು.

ಬಿವಿವಿ ಸಂಘದ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಬಯೋಇನ್ನೋವೇಷನ್ ಸೆಂಟರ್, ಲೈವಾನ್ ಬಯೋಲ್ಯಾಬ್ಸ್ ಹಾಗೂ ಬಿವಿಜಿ ಲೈಫ್ ಸೈನ್ಸ್ ಸಹಯೋಗದಲ್ಲಿ ಶುಕ್ರವಾರ ನಡೆದ ‘ದಿ ಆರ್ಕಿಟೆಕ್ಚರ್ ಆಫ್ ರಿಸರ್ಚ್ ಲೈಫ್ಸೈಕಲ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದ ಸಂಶೋಧನಾ ಚಟುವಟಿಕೆಗೆ ಇದು ಒಂದು ವೇದಿಕೆ ಆಗಲಿ. ಸಂಶೊಧನೆಗೆ ಪರಿಶೋಧನೆ, ವಿಶ್ಲೇಷಣೆ, ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ, ಅನುಷ್ಠಾನ ಮತ್ತು ನಿರ್ವಹಣೆ ಮುಖ್ಯವಾಗಿವೆ, ಸಂಶೋಧನಾ ಪ್ರಬಂಧಗಳು ಸಮಾಜಕ್ಕೆ ಮತ್ತು ಸಮಾಜದ ಸುಧಾರಣೆಗೆ ಅವಶ್ಯಕವಾಗಿದೆ. ಸಂಶೋಧನೆಯು ಅತ್ಯುನ್ನತ ಮೌಲ್ಯ ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಪ್ರಬಂಧ ಹೇಗೆ ಪ್ರಸ್ತುತ ಪಡಿಸುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಪ್ರಬಂಧವು ಮೌಲ್ಯ ಒಳಗೊಂಡಿರಲಿ ಎಂದು ಹೇಳಿದರು.

ಡಾ.ವಿ.ಎಂ. ಚಂದ್ರಶೇಖರ ಮಾತನಾಡಿ, ಜ್ಞಾನ ವಿನಿಮಯ, ಕೌಶಲ ಅಭಿವೃದ್ಧಿ ಮತ್ತು ಸಂಶೋಧನೆಗೆ ಹೊಸ ದೃಷ್ಟಿಕೋನ ಒದಗಿಸುವಲ್ಲಿ ಕಾರ್ಯಾಗಾರ ಪ್ರಮುಖವಾಗಿದೆ ಎಂದರು.

ಡಾ.ಜಿ. ಜಗದೀಶ, ಡಾ.ಬಾಲಾಕುಮಾರ ಪಿಚೈ, ಡಾ.ಶುಭದಾ ನಗರಕರ, ಡಾ.ರಾಜರಾಜಶೇಖರನ್, ಡಾ.ಮನೀಶ್ ಬರವಾಲಿಯಾ ವಿಶೇಷ ಉಪನ್ಯಾಸ ನೀಡಿದರು.

ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಡಾ.ವೈ. ಶ್ರೀನಿವಾಸ ಉಪಸ್ಥರಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.