ಶುಕ್ರವಾರ, ಸೆಪ್ಟೆಂಬರ್ 24, 2021
27 °C

‘ಸತ್ಯ ಮಾರ್ಗದಿಂದ ಜೀವನದಲ್ಲಿ ನೆಮ್ಮದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಬಕವಿ ಬನಹಟ್ಟಿ: ‘ಸತ್ಯ ಮಾರ್ಗದಿಂದ ನಡೆದರೆ ಮಾತ್ರ ಜೀವನದಲ್ಲಿ ನೆಮ್ಮದಿ ಪಡೆಯಲು ಸಾಧ್ಯ. ಪ್ರತಿಯೊಬ್ಬರ ದೇಹದಲ್ಲಿ ಭಗವಂತನಿದ್ದಾನೆ’ ಎಂದು ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ಮಠದ ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬಸವಗೋಪಾಲ ಮಠದಲ್ಲಿ ಬುಧವಾರ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

‘ಜಾತಿ ಅಭಿಮಾನವನ್ನು ಬಿಟ್ಟು, ನೀತಿ ಧರ್ಮದಿಂದ ನಡೆಯಬೇಕು. ರಾಜಕಾರಣಿಗಳು ಮತ್ತು ಅಧಿಕಾರಿಗಳು ನುಡಿದಂತೆ ನಡೆಯಬೇಕು’ ಎಂದು ತಿಳಿಸಿದರು.

ನೂರಾರು ಮಹಿಳೆಯರಿಗೆ ಉಡಿ ತುಂಬಲಾಯಿತು. ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕದಾಡಿ, ಎ. ಕಾರ್ತಿಕ, ಎ. ಮುತ್ತು, ಕರಿಸಿದ್ದಪ್ಪ ಪೂಜಾರಿ, ನಾಗಪ್ಪ ಕಂಠಿಕಾರ, ಭೀಶಸಿ ನಾಗನೂರ, ಬಸವರಾಜ ಕದಾಡಿ, ಪಾಮನ್ನ ಕಟ್ಟಿಮನಿ, ನಬಿಸಾಬ್ ಮುಲ್ಲಾ, ಕರಿಪ್ಪಾ ದಡ್ಡಿಮನಿ, ನಾಗಪ್ಪ ಚೌಗಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.