ಕಮತಗಿ (ಅಮೀನಗಡ): ‘ಪಟ್ಟಣದ ಹೊಳೆ ಹುಚ್ಚೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಗ್ರಾಹಕರ ಸ್ನೇಹಿಯಾಗಿದ್ದು, ಮಾರ್ಚ್ 2024ಕ್ಕೆ ₹3.24 ಕೋಟಿ ನಿವ್ವಳ ಲಾಭ ಗಳಿಸಿದೆ‘ ಎಂದು ಸೊಸೈಟಿಯ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಹೇಳಿದರು.
ಪಟ್ಟಣದ ಹೊಳೆ ಹುಚ್ಚೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ 34ನೇ ವಾರ್ಷಿಕ ಮಹಾಸಭೆಯು ಸೆ.14 ರಂದು ಪಾರ್ವತಿ ಪರಮೇಶ್ವರ ಸಾಂಸ್ಕೃತಿಕ ಭವನದಲ್ಲಿ ಬೆಳಿಗ್ಗೆ10 ಗಂಟೆಗೆ ನಡೆಯಲಿದೆ. ಸಂಘದಲ್ಲಿ ಪ್ರಸ್ತುತ 8854 ಸದಸ್ಯರಿದ್ದು, 16 ಶಾಖೆಗಳನ್ನು ಹೊಂದಿದೆ’ ಎಂದರು.
ಪ್ರತಿಭಾ ಪುರಸ್ಕಾರ: ಎಸ್ಎಸ್ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಐಎಎಸ್, ಕೆಎಎಸ್, ಐಐಫ್‌ಎಸ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಎಂದಿನಂತೆ ಪ್ರತಿಭಾ ಪುರಸ್ಕಾರ, ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಮಲ್ಲಪ್ಪ ಮೇದಾರ, ನಿದೇರ್ಶಕ ಮಂಡಳಿಯ ಹುಚ್ಚಪ್ಪ ಸಿಂಹಾಸನ, ರಮೇಶ ಜಮಖಂಡಿ, ಕಮಲಪ್ಪ ಕಡ್ಲಿಮಟ್ಟಿ, ಹನಮಂತ ಕಡಿವಾಲ, ಪ್ರಧಾನ ವ್ಯವಸ್ಥಾಪಕ ಶಿವಶಂಕರ ಮಾಶೆಟ್ಟಿ, ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ ಕಡ್ಲಿಮಟ್ಟಿ, ಆಡಳಿತ ಸಲಹೆಗಾರರಾದ ಪಿ.ಎಸ್.ಪರಗಿ, ಸುರೇಶ ಕಟ್ಟಿಮನಿ ಇದ್ದರು.