ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್: ಮನವೊಲಿಸಿದ ಸಿಬ್ಬಂದಿ

Last Updated 29 ಮಾರ್ಚ್ 2022, 1:57 IST
ಅಕ್ಷರ ಗಾತ್ರ

ತೇರದಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಟ್ಟಣದ ಎಸ್ಎಂ, ಸಿದ್ದೇಶ್ವರ ಹಾಗೂ ಎಸ್ಪಿ ಪಿಯು ಮೂರು ಕೇಂದ್ರಗಳಲ್ಲಿ ನಡೆಯಿತು.

ಪ್ರಭುಲಿಂಗ ಪಿಯು ಕೇಂದ್ರದಲ್ಲಿ ಉರ್ದು ವಿಭಾಗದ ಅಂಗವಿಕಲ ವಿದ್ಯಾರ್ಥಿ ಸಹಾಯಕನ ಸಹಾಯದಿಂದ ಪರೀಕ್ಷೆ ಬರೆದರು. ಮೂರು ಕೇಂದ್ರಗಳಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದು ಬ್ಲಾಕ್‌ಗಳಲ್ಲಿ ಹೋಗಿ ಕುಳಿತಿದ್ದರು. ಹಿಜಾಬ್ ಧರಿಸಿದರೆ ಅವಕಾಶ ಸಿಗದು, ಇದು ಸರ್ಕಾರದ ಆದೇಶ ಎಂದು ಅಧೀಕ್ಷಕರು ಮತ್ತು ಸಿಬ್ಬಂದಿ ತಿಳಿಹೇಳಿದ ನಂತರ ಹಿಜಾಬ್ ತೆಗೆದರು

ಕೇಂದ್ರಗಳ ಸುತ್ತಲೂ 200ಮೀಟರ್ ವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು. ಹೊರಗಿವರಿಗೆ ಕೇಂದ್ರ ಕಡೆಗೆ ಬರಲು ಅವಕಾಶ ಇರಲಿಲ್ಲ. ಪಾಲಕರು ಕೂಡ ಕೇಂದ್ರದ ಒಳಗೆ ಬರದಂತೆ ಕೇಂದ್ರದ ಸಿಬ್ಬಂದಿ ಸೂಚನೆ ನೀಡಬೇಕೆಂದು ಠಾಣಾಧಿಕಾರಿ ರಾಜು ಬೀಳಗಿ ಪರೀಕ್ಷಾ ಕೇಂದ್ರಗಳಿಗೆ ಸಲಹೆ ನೀಡಿದರು. ತಹಸೀಲ್ದಾರ್ ಸಂಜಯ ಇಂಗಳೆ, ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರ ಮೂರು ಕೇಂದ್ರಗಳಿಗೆ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT