ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಬದಲಾಯಿಸುವ ಬರಹಗಳ ಅಗತ್ಯ

Published 24 ಮೇ 2023, 15:54 IST
Last Updated 24 ಮೇ 2023, 15:54 IST
ಅಕ್ಷರ ಗಾತ್ರ

ಬಾಗಲಕೋಟೆ: ಪ್ರಸ್ತುತ ದಿನಗಳಲ್ಲಿ ಸಮಾಜಕ್ಕೆ ಸಂದೇಶ ನೀಡುವಂತಹ, ಸಮಾಜವನ್ನು ಬದಲಾಯಿಸುವಂತಹ ಬರಹಗಳ ಅಗತ್ಯವಿದೆ ಎಂದು ಕೆರೂಡಿ ಆಸ್ಪತ್ರೆಯ ಡಾ.ಎಂ. ನಾರಾಯಣ ಹೇಳಿದರು.

ತುಮಕೂರಿನ ಅನಾಕ ಪ್ರಕಾಶನ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಆರ್. ನಾಗರಾಜು ಅವರ ‘ಸುರಗಿರಿ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಾಗರಾಜ ಅವರು ಬಹಳ ಕ್ರಿಯಾಶೀಲರಾಗಿದ್ದು, ಅವರ ಬರಹಗಳನ್ನು ಓದಿದ್ದೇನೆ. ಅವರ ಲೇಖನಗಳು ಮಾನವೀಯತೆ, ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಸೂರ್ಯಕಾಂತ ಬಿ. ಬಂಡಾರಿ ಮಾತನಾಡಿ, ಹೊಸ ಆಲೋಚನೆಯ ವೈಚಾರಿಕತೆಯುಳ್ಳ ಸಮಾಜಪರ, ಜನಪರ, ಪ್ರಗತಿಪರ ಸಾಹಿತ್ಯ ಮತ್ತು ಭಾವನಾತ್ಮಕ ಸಂಬಂಧಗಳನ್ನು ಒಳಗೊಳ್ಳುವಂತಹ ಲೇಖನಗಳು ಈ ಕೃತಿಯಲ್ಲಿ ಕಂಡುಬರುತ್ತವೆ ಎಂದರು.

ಲೇಖಕ ಪ್ರೊ.ಆರ್. ನಾಗರಾಜು, ಸುಧೀರ್, ರಾಜು, ವಿಶ್ವನಾಥ ಸಿಂಹಾಸನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT