ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವೇಶ್ವರ ಸಮಸಮಾಜದ ಕನಸು ಕಂಡ ಮಹಾತ್ಮ: ತಿಮ್ಮಾಪುರ

Published : 16 ಸೆಪ್ಟೆಂಬರ್ 2024, 14:25 IST
Last Updated : 16 ಸೆಪ್ಟೆಂಬರ್ 2024, 14:25 IST
ಫಾಲೋ ಮಾಡಿ
Comments

ಮಹಾಲಿಂಗಪುರ: ಜಗಜ್ಯೋತಿ ಬಸವೇಶ್ವರರು ಸಮಸಮಾಜದ ಕನಸು ಕಂಡ ಮಹಾತ್ಮರು. ಸರ್ವ ಮಾನವರೂ ಸಮಾನರು, ಕಾಯಕವೇ ಕೈಲಾಸ ಎಂಬ ಅವರ ತತ್ವಾದರ್ಶಗಳು ಇಡೀ ಜಗತ್ತಿಗೆ ದಾರಿದೀಪ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಲ ಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮದಿಂದ ನಿರ್ಮಿಸಲಾದ ಬಸವೇಶ್ವರರ ಪಂಚಲೋಹದ ಪುತ್ಥಳಿಯನ್ನು ಸೋಮವಾರ ಲೋಕಾರ್ಪಣೆ ಮಾಡಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ನಂತರ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ರಸ್ತೆ ಮತ್ತು ಅಲಂಕಾರಿಕ ವಿದ್ಯುತ್ ದೀಪಗಳನ್ನು ಉದ್ಘಾಟಿಸಿದರು. ವೇದಿಕೆಯ ಮೇಲೆ ಕೇಕ್ ಕತ್ತರಿಸಿ ಸಚಿವ ತಿಮ್ಮಾಪುರ ಅವರ ಜನ್ಮದಿನ ಆಚರಿಸಿ, ಅವರಿಗೆ ಸನ್ಮಾನಿಸಲಾಯಿತು.

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಅಬ್ದುಲ್‍ರಜಾಕ ಬಾಗವಾನ, ಶೇಖರ ಅಂಗಡಿ, ಸಿದ್ದು ಕೊಣ್ಣೂರ, ರವಿಗೌಡ ಪಾಟೀಲ, ಬಲವಂತಗೌಡ ಪಾಟೀಲ, ಬಾಳಕೃಷ್ಣ ಮಾಳವಾದೆ, ಮಹಾಲಿಂಗಪ್ಪ ತಟ್ಟಿಮನಿ, ನಿಂಗಪ್ಪ ಬಾಳಿಕಾಯಿ, ಪ್ರಕಾಶ ಮಮದಾಪುರ, ಕೃಷ್ಣಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಜಿಎಲ್‍ಬಿಸಿ ಅಧಿಕಾರಿ ಮಹಾಂತೇಶ ಯಡಪ್ಪನವರ ಇದ್ದರು.

ಇದಕ್ಕೂ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಾಗಿದ ಮೆರವಣಿಗೆಯಲ್ಲಿ ಬಸವ ಬಳಗದ ಸದಸ್ಯರು ತಲೆಮೇಲೆ ವಚನ ಸಂಪುಟವನ್ನು ಇಟ್ಟುಕೊಂಡು ಸಾಗಿದರು.

ತರಾತುರಿಯಲ್ಲಿ ಕಾರ್ಯಕ್ರಮ: ತಮ್ಮ ಕ್ಷೇತ್ರದ ಜನತೆಯಿಂದ ಜನ್ಮದಿನಾಚರಣೆ ಸಂಭ್ರಮದಲ್ಲಿದ್ದ ಸಚಿವ ಆರ್.ಬಿ.ತಿಮ್ಮಪುರ ಅವರು ತರಾತುರಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಸವಾಭಿಮಾನಿಗಳಿಗೆ ಬೇಸರ ತರಿಸಿತು. ವೇದಿಕೆಗೆ ಆಗಮಿಸುತ್ತಲೇ ನಿರೂಪಕರಿಂದ ಸ್ವಾಗತ ಭಾಷಣವನ್ನು ‌ಮಾಡಲು ಕೊಡದೆ ನೇರವಾಗಿ ತಾವೇ ಮೈಕ್‌ನತ್ತ ಧಾವಿಸಿ ಕೇವಲ ಎರಡು ನಿಮಿಷದಲ್ಲಿ ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸಿದರು. ಅವರ ಹಿಂದೆಯೇ ಶಾಸಕ, ಸಂಸದರು ಕೂಡ ಭಾಷಣವನ್ನೂ ಮಾಡದೇ ತೆರಳಿದರು. ಇಡೀ ಕಾರ್ಯಕ್ರಮ ಐದು ನಿಮಿಷದಲ್ಲಿ ಮುಗಿದಿದ್ದು ಅಸಮಾಧಾನ ಮೂಡಿಸಿತು.

ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪಂಚಲೋಹದ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು
ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪಂಚಲೋಹದ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು
ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪಂಚಲೋಹದ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಶಾಸಕ ಸಿದ್ದು ಸವದಿ ಸಂಸದ ಪಿ.ಸಿ.ಗದ್ದಿಗೌಡರ ಭಾಗವಹಿಸಿದ್ದರು. 
ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪಂಚಲೋಹದ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಶಾಸಕ ಸಿದ್ದು ಸವದಿ ಸಂಸದ ಪಿ.ಸಿ.ಗದ್ದಿಗೌಡರ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT