ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದೇಶ್ವರ ಸ್ವಾಮೀಜಿ ಸ್ಮರಣೆ: ವಿವಿಧ ಕಾರ್ಯಕ್ರಮ

Published 17 ಜುಲೈ 2023, 12:33 IST
Last Updated 17 ಜುಲೈ 2023, 12:33 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಜನ್ಮ ದಿನ ಅಂಗವಾಗಿ ಅವರ ಉತ್ತಮ ಸಂದೇಶವುಳ್ಳ ಪುಸ್ತಕಗಳ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವೈಭವ ಕ್ರಿಯೇಷನ್ಸ್‌ನ ಘನಶ್ಯಾಮ್‌ ಭಾಂಡಗೆ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹50 ಸಾವಿರ ವೆಚ್ಚದಲ್ಲಿ ಪುಸ್ತಕಗಳನ್ನು ಹಾಗೂ ಪೆನ್‌ ಡ್ರೈವ್‌ನಲ್ಲಿ ಅವರ ಸಂದೇಶವನ್ನು ಮನೆ, ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದರು.

‘ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ₹1 ಲಕ್ಷ ಮೊತ್ತದ ಪ್ರಶಸ್ತಿ ನೀಡಲು ಯೋಜಿಸಲಾಗಿತ್ತು. ಅವರ ಹಲವಾರು ಭಕ್ತರು ಪ್ರಶಸ್ತಿ ನೀಡುವುದು ಬೇಡ ಎಂದು ಸೂಚಿಸಿದ ಮೇಲೆ, ಅವರ ಸಂದೇಶಗಳನ್ನು ಜನರಿಗೆ ತಲುಪಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ಪ್ರಶಸ್ತಿ ಮೊತ್ತದ ಜತೆಗೆ ಕಾರ್ಯಕ್ರಮಕ್ಕೆ ತಗುಲಬಹುದಾಗಿದ್ದ ₹50 ಸಾವಿರ ಸೇರಿಸಿ, ₹1.5 ಲಕ್ಷದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ತಲಾ ₹25 ಸಾವಿರ ವೆಚ್ಚದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪೌರ ಕಾರ್ಮಿಕರ ಮಕ್ಕಳಿಗೆ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಅಂಗವಿಕಲ ಮಕ್ಕಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದು ಹೇಳಿದರು.

₹25 ಸಾವಿರ ವೆಚ್ಚದಲ್ಲಿ ಅವಶ್ಯವಿರುವ, ಸಂಕಷ್ಟದಲ್ಲಿರುವ ಯೋಧರು ಹಾಗೂ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು ಎಂದರು.

ಸಿದ್ದು ಉದುಪುಡಿ, ತಮ್ಮಣ್ಣ ಗೌಳಿ, ಉಮೇಶ ಬರಗುಂಡಿ, ಮಹಬೂಬ್ ತೊಣಶ್ಯಾಳ, ಕಲ್ಮೇಶ ಕೋಟಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT