ಬಾಗಲಕೋಟೆ : ಜಿಲ್ಲೆಯ ಹೂಲಗೇರಿ ಕ್ರಾಸ್ ಬಳಿ ಸಿದ್ದರಾಮಯ್ಯ ಅವರ ಜನ್ಮ ದಿನಕ್ಕೆ ಹೊರಟಿದ್ದ ಕ್ರೂಷರ್, ಹಾಲಿನ ವಾಹನಕ್ಕೆ ಡಿಕ್ಕಿ ಹೊಡೆದು ಒಬ್ಬರು ಮೃತರಾಗಿದ್ದಾರೆ.

ಜಿಲ್ಲೆಯ ಮುಧೋಳ ತಾಲ್ಲೂಕಿನ ಹಿರೇಆಲಗುಂಡಿ ಬಿ.ಕೆ. ಹಾಗೂ ಚಿಕ್ಕ ಆಲಗುಂಡಿ ಗ್ರಾಮದವರು. ಮಂಗಳವಾರ ಸಂಜೆ ವಾಹನ ಗ್ರಾಮದಿಂದ ಹೊರಟಿತ್ತು.

ಚಿಕ್ಕ ಆಲಗುಂಡಿಯ ಪ್ರಕಾಶ ಬಡಿಗೇರ ಎಂಬುವವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಐವರನ್ನು ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಜಿಲ್ಲಾ ಆಸ್ಪತ್ರೆಗೆ ಮಲ್ಲಪ್ಪ ಚಿಚಖಂಡಿ, ಮಂಜುನಾಥ ಚಿಚಖಂಡಿ, ಆನಂದ ಮುತ್ತಪ್ಪನವರ ಅವರನ್ನು ದಾಖಲಿಸಲಾಗಿದ್ದು, ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಸಿದ್ದರಾಮೋತ್ಸವಶಕ್ತಿ ಪ್ರದರ್ಶನವಲ್ಲ,ಅಮೃತೋತ್ಸವ:ಸಿದ್ದರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.