ತೇರದಾಳ: ಭಾರತೀಯರು ನಮ್ಮತನ, ಸಂಸ್ಕೃತಿ ಅರಿತಾಗಲೆಲ್ಲ ಭಾರತ ವಿಶ್ವಗುರುವಾಗಿದೆ. ಅದನ್ನು ಮರೆತಿರುವಾಗಲೆಲ್ಲ ಅದು ದುರ್ಬಲವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.

ಮಹಾತ್ಮಾ ಗಾಂಧಿ ಕ್ರೀಡಾಂಗಣದ ಅಲ್ಲಮಪ್ರಭು ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದ ವಕ್ತಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ಸಾನಿಧ್ಯ ವಹಿಸಿದ್ದ ಹಳಿಂಗಳಿ ಕಮರಿಮಠದ ಶರಣಬಸವ ದೇವರು, ನೀಲಕಂಠೇಶ್ವರ ಮಠ ಹಳೇ ಹುಬ್ಬಳ್ಳಿ ಹಾಗೂ ತೇರದಾಳದ ಶಿವಶಂಕರ ಶಿವಾಚಾರ್ಯ ಶ್ರೀ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಡಾ.ಪುಷ್ಪದಂತ ದಾನಿಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಮೊದಲು ಕಲ್ಲಟ್ಟಿ ಗಂಗಾಧರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ಜರುಗಿತು. ಶೋಭಾಯಾತ್ರೆಯಲ್ಲಿ ಹಲವು ಕಲಾವಿದರ ವಾದನ, ಮಕ್ಕಳು ರಾಷ್ಟ್ರನಾಯಕರ ಛದ್ಮವೇಷ ಧರಿಸಿದ್ದು ಕಳೆ ತಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.