ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದದಲ್ಲಿ ನೈಜ ಸೃಜನಶೀಲತೆ: ಮದ್ಲಾಪೂರ

Last Updated 16 ಜನವರಿ 2012, 8:25 IST
ಅಕ್ಷರ ಗಾತ್ರ

ಕೆರೂರ: ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಪರಿಸರ, ಬದುಕು ಹಾಗೂ ನೋವು ನಲಿವು, ಕಂಡುಂಡ ಆಸಕ್ತಿದಾ ಯಕ ಅನುಭವಗಳು ಅಡಗಿದೆ. ಈ ಸಾಹಿತ್ಯದಲ್ಲಿ ನೈಜವಾದ ಸೃಜನಶೀಲತೆ ಮನೆ ಮಾಡಿದೆ ಎಂದು ಕನ್ನಡ ಕಲಾ ಶಿಕ್ಷಕ ಬಿ.ವಿ. ಮುದ್ಲಾಪೂರ ಹೇಳಿದರು.

ಪಟ್ಟಣದ ವಿದ್ಯಾವರ್ಧಕ ಸಂಘದ ಅ.ರಾ. ಹಿರೇಮಠ ಪ್ರೌಢಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋ ಗದಲ್ಲಿ ನಡೆಸಿದ `ವಿದ್ಯಾರ್ಥಿಗಳಿಗಾಗಿ ಸಂವಾದ~ ಕಾರ್ಯಕ್ರಮದಲ್ಲಿ ಜಾನಪದ ಕಲಾ ಪ್ರಕಾರ ಕುರಿತು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಸಾಹಿತ್ಯದ ಅಭಿರುಚಿ ರೂಢಿಸಿಕೊಂಡರೆ ಅವರಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಗೊಳ್ಳುತ್ತದೆ ಎಂದರು.

ನಂತರ ಪೌರಾಣಿಕ ಯುಗದ ಬಬ್ರುವಾಹನ, ಬಲ ಭೀಮ ಹಾಗೂ ಅರ್ಜುನರ ಪಾತ್ರವನ್ನು ಅಭಿನಯಿಸುವ ಮೂಲಕ  ವಿದ್ಯಾರ್ಥಿಗಳನ್ನು ರಂಜಿಸುವಲ್ಲಿ ಯಶಸ್ವಿ ಯಾದರು.

ವಿದ್ಯಾರ್ಥಿನಿ ಶ್ರುತಿ ಕುದರಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಸಹಾಯಕರಾಗಿ ವಸಂತಾ ಸುಟಗಲ್, ಸೀಮಾ ಪೂಜಾರ, ಹೀನಾ ಭಾಂಗಿ ವಿದ್ಯಾರ್ಥಿ ವಲಯದಿಂದ ಜಾನಪದ ಸಾಹಿತ್ಯ ಕುರಿತು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಂದ್ರಶೇಖರ ತಾಳಿಕೋಟೆ, ಮುಖ್ಯ ಶಿಕ್ಷಕ ವೈ.ಡಿ. ರಡ್ಡೇರ, ಸಿ.ಎಸ್. ನಾಗನೂರ, ಎನ್.ಬಿ. ಬಾಗೇವಾಡಿ, ಜಗದೀಶ ಬಾರಕೇರ ಮುಂತಾದ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT