ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 12 ಮಂದಿ ಆಯ್ಕೆ

ಇಂದು ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಪ್ರಶಸ್ತಿ ವಿತರಣೆ
Published 4 ಸೆಪ್ಟೆಂಬರ್ 2024, 15:53 IST
Last Updated 4 ಸೆಪ್ಟೆಂಬರ್ 2024, 15:53 IST
ಅಕ್ಷರ ಗಾತ್ರ

ಬಳ್ಳಾರಿ: 2024–25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಬುಧವಾರ ಬಿಡುಗಡೆ ಮಾಡಿದ್ದು, ಮೂರು ವಿಭಾಗಗಳಲ್ಲಿ 12 ಮಂದಿಗೆ ಪ್ರಶಸ್ತಿ ದೊರೆತಿದೆ. 

ಕಿರಿಯ ಪ್ರಾಥಮಿಕ ಶಾಲೆ: ಬಳ್ಳಾರಿಯ ಬಾಲಯ್ಯ ಕ್ಯಾಂಪ್‌ ಶಾಲೆಯ ಮಹಾಂತೇಶ್‌ ಮೇಟಿ, ಕುರುಗೋಡಿನ ಕರಿಮಾರೆಮ್ಮ ಕಾಲೋನಿ ಶಾಲೆಯ ಹೊನ್ನೂರ್‌ ಬಿ, ಸಂಡೂರಿನ ಆಶ್ರಯ ಕಾಲೋನಿ ಸೋವೇನಹಳ್ಳಿ ಶಾಲೆಯ ಕುಮಾರಸ್ವಾಮಿ, ಸಿರುಗುಪ್ಪದ ದೇವಲಾಪುರ ಶಾಲೆಯ ಫಕ್ರುದ್ದೀನ್‌ ಸಾಹೇಬ್‌ ಪಿ ಅವರಿಗೆ ಪ್ರಶಸ್ತಿ ಸಿಕ್ಕಿದೆ. 

ಹಿರಿಯ ಪ್ರಾಥಮಿಕ ಶಾಲೆ: ಬಳ್ಳಾರಿಯ ಬೈಲೂರು ಶಾಲೆಯ ವಿ. ತ್ರಿವೇಣಿ, ಕುರುಗೋಡು ಶಾಲೆಯ ಗವಿಸಿದ್ದಪ್ಪ, ಸಂಡೂರಿನ ತುಂಬರಗುದ್ದಿಯ ಅರ್ಚನಾ, ಸಿರುಗುಪ್ಪದ ಅರಳಿಗನೂರು ಶಾಲೆಯ ಎರೆಪ್ಪಗೌಡ ಸಿ.ಡಿಗೆ ಪ್ರಶಸ್ತಿ ಲಭಿಸಿದೆ. 

ಪ್ರೌಢಶಾಲಾ ವಿಭಾಗ: ಬಳ್ಳಾರಿಯ ಕೆ.ವೀರಾಪುರದ ಟಿ.ಜಿ ನಾಗರಾಜ, ಕುರುಗೋಡು ತಾಲೂಕಿನ ಇಂದಿರಾನಗರ ಶಾಲೆಯ ಶ್ರೀಲತಾ ಪಿ, ಸಂಡೂರಿನ ಎಪಿಎಂಸಿ  ಶಾಲೆಯ ಬಾಷ ಮೆಹಬೂಬ, ಸಿರುಗುಪ್ಪದ ಕುರುವಳ್ಳಿ ಶಾಲೆಯ ಸಂತೋಷ ಅವರಿಗೆ ಪ್ರಶಸ್ತಿ ಸಿಕ್ಕಿದೆ. 

ನಗರದ ವಾಲ್ಮೀಕಿ ಭವನದಲ್ಲಿ ಇಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಡಿಡಿಪಿಐ ಕಚೇರಿ ತಿಳಿಸಿದೆ. 

ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ₹2 ಸಾವಿರ ನಗದು, ಪ್ರಮಾಣ ಪತ್ರ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ 3 ಸಾವಿರ ನಗದು ಮತ್ತು ಪ್ರಮಾಣ ಪತ್ರವನ್ನು ಪ್ರಶಸ್ತಿ ಜತೆಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT