ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಆಂಜನೇಯ ಸ್ವಾಮಿ ರಥೋತ್ಸವ

Last Updated 12 ಏಪ್ರಿಲ್ 2019, 14:07 IST
ಅಕ್ಷರ ಗಾತ್ರ

ಹೊಸಪೇಟೆ: ಆಂಜನೇಯ ಸ್ವಾಮಿ ರಥೋತ್ಸವ ಇಲ್ಲಿನ ಚಿತ್ತವಾಡ್ಗಿಯಲ್ಲಿ ಶುಕ್ರವಾರ ಸಂಜೆ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಜರುಗಿತು.

ಪಾದುಗಟ್ಟೆ ಬಸವಣ್ಣ ಗುಡಿಯಿಂದ ಕಲ್ಮಠೇಶ್ವರ ದೇವಸ್ಥಾನದ ವರೆಗೆ ಭಕ್ತರು ತೇರು ಎಳೆದರು. ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತರು ಹರಕೆ ತೀರಿಸಿದರು. ಕಟ್ಟಡಗಳ ಮೇಲೆ ನಿಂತು ಜನ ತೇರು ಎಳೆಯುವುದನ್ನು ಕಣ್ತುಂಬಿಕೊಂಡರು.

ಇದಕ್ಕೂ ಮುನ್ನಪಟ ಹರಾಜು ನಡೆಯಿತು. ಎಚ್.ಕೆ. ಅಡಿಗಿ ಶ್ರೀಧರ ಅವರು ₹38 ಸಾವಿರಕ್ಕೆ ಪಟ ತನ್ನದಾಗಿಸಿಕೊಂಡರು.ಚಿತ್ತವಾಡ್ಗಿ, ಹೊಸೂರು, ಎರೆಬೈಲು, ಕರೆಕಲ್ ಮಾಗಾಣಿ, ಇಪ್ಪಿತೇರಿ ಸೇರಿದಂತೆ ವಿವಿಧ ಭಾಗದ ಜನ ಬಂದು, ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT