ತೋರಣಗಲ್ಲು(ಬಳ್ಳಾರಿ): ಕುರೆಕುಪ್ಪ ಪಟ್ಟಣದ ಲಾರಿ ಟಾರ್ಮಿನಲ್‌ನಲ್ಲಿ ಗುರುವಾರ ರಾತ್ರಿ ಕಳ್ಳತನದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಲಾರಿ ಚಾಲಕರು ಥಳಿಸಿದ್ದು, ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ.

‘ಟರ್ಮಿನಲ್‌ಗೆ ಬಂದ ಮೂವರು ಅಲ್ಲಲ್ಲಿ ಓಡಾಡಿ, ಲಾರಿ ಚಾಲಕರ ಮೊಬೈಲ್, ಪರ್ಸ್ ಕದಿಯಲು ಯತ್ನಿಸಿದ್ದಾರೆ. ಅವರಲ್ಲಿ ಸಿಕ್ಕಿಬಿದ್ದ ಒಬ್ಬರನ್ನು ಲಾರಿ ಚಾಲಕರು ಮನಬಂದಂತೆ ಥಳಿಸಿದ್ದಾರೆ. ತೀವ್ರ ಸ್ವರೂಪದ ಗಾಯಗಳಿಂದ ಅವರು ಮೃತಪಟ್ಟಿದ್ದು ತನಿಖೆಯಿಂದ ಗೊತ್ತಾಗಿದೆ’ ಎಂದು ತೋರಣಗಲ್ಲು ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅರ್ಮಾನ್ ಮತ್ತು ಅಫ್ಜಲ್ ಎಂಬ ಇಬ್ಬರು ಲಾರಿ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಕಾರಣರಾದ ಇತರರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ. ಮೃತ ವ್ಯಕ್ತಿ ಹೊರರಾಜ್ಯದವರೆಂದು ಗೊತ್ತಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.