ಬಳ್ಳಾರಿ ನಗರದ ಎಪಿಎಂಸಿ ಮೈದಾನದಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಬಿಜೆಪಿಯ ನಾಯಕರು ಕೆಸರಿ ಶಾಲು ಪ್ರದರ್ಶನ ಮಾಡಿದರು.
ಸುಪಾರಿ ಕಿಲ್ಲರ್‌ಗಳನ್ನು ಕರೆ ತಂದು ಬಳ್ಳಾರಿಯಲ್ಲಿ ಕೊಲೆ ಮಾಡಿಸಲಾಗಿದೆ. ಸಿದ್ದರಾಮಯ್ಯ ಅವರು ಶಾಸಕ ಭರತ್ ರೆಡ್ಡಿಯನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಸಿಬಿಐಗೆ ಕೊಡಬೇಕು
ಗೋವಿಂದ ಕಾರಜೋಳ ಸಂಸದ
ಬಳ್ಳಾರಿಯನ್ನು ಭಸ್ಮ ಮಾಡುತ್ತೇನೆ ಎನ್ನುವ ಭರತ್ ರೆಡ್ಡಿ ಒಬ್ಬ ಭಸ್ಮಾಸುರ. ನಾವು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಭರತ್ ತನ್ನ ಹೆಸರು ಹಾಕಿಕೊಳ್ಳುತ್ತಿದ್ದಾರೆ. ಇನ್ನು ನಿನ್ನ ಆಟ ನಡೆಯುವುದಿಲ್ಲ.
ಸೋಮಶೇಖರ ರೆಡ್ಡಿ ಮಾಜಿ ಶಾಸಕ
ಭರತ್ ರೆಡ್ಡಿ ರೌಡಿ
ಅರುಣಾ ‘ನಿನ್ನ (ಭರತ್ ರೆಡ್ಡಿ) ತಂದೆ (ಸೂರ್ಯನಾರಾಯಣ ರೆಡ್ಡಿ)ಯು ದೇವರೆಡ್ಡಿ ಎಂಬ ವ್ಯಕ್ತಿಗೆ ವಂಚಿಸಿ ಅಸ್ತಿ ಕಬಳಿಸಿ ಶ್ರೀಮಂತರಾದರು. ದೇವರೆಡ್ಡಿಯ ಮೂವರು ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದರು. ಆ ಹೆಣ್ಣು ಮಕ್ಕಳು ನ್ಯಾಯಕ್ಕಾಗಿ ರಾಷ್ಟ್ರಪತಿ ಮೊರೆ ಹೋದರು. ಅವರ ಕಣ್ಣೀರು ನಿನ್ನ ರಾಜಕೀಯ ಅಂತ್ಯವಾಗಿಸುತ್ತದೆ. ನಿನ್ನ ತಂದೆ ಸೂರ್ಯ ನಾರಾಯಣ ರೆಡ್ಡಿಯು ದೇವರೆಡ್ಡಿ ಬಾಯಿಗೆ ಮಣ್ಣು ಹಾಕಿ ನಿನ್ನ ಬಾಯಿಗೆ ಚಿನ್ನದ ಚಮಚ ಇಟ್ಟಿದ್ದ. ಇಂಥ ನೀನು ಶ್ರೀಮಂತನಾ? ನೀನು ರೌಡಿ ಗೂಂಡಾ’ ಎಂದು ಜನಾರ್ದನ ರೆಡ್ಡಿ ಪತ್ನಿ ಅರುಣಾ ಮೂದಲಿಸಿದರು. ‘ಕಳೆದ ಚುನಾವಣೆಯಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರ ಲಾಭ ಎಂಬಂತೆ ಭರತ್ ರೆಡ್ಡಿ ಗೆದ್ದಿದ್ದರು’ ಎಂದರು.