ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಮತ್ತೆ 6 ಮೊಬೈಲ್ ಫೋನ್ಗಳು ಪತ್ತೆಯಾಗಿವೆ.

ಡಿ.20ರ ರಾತ್ರಿ 10ರಿಂದ 12ರವರೆಗೆ ಜೈಲು ಅಧೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಈ ವೇಳೆ ಮೂರನೇ ಬ್ಯಾರಕ್ನ ನೆಲದಡಿ 3 ಕೀಪ್ಯಾಡ್ ಮೊಬೈಲ್ ಫೋನ್ಗಳು, ಒಂದು ಚಾರ್ಜರ್, ಜನರಲ್ ಶೌಚಾಲಯದ ಮುಂಭಾಗದ ಗಿಡಗಳ ಮರೆಯಲ್ಲಿ ಮೂರು ಕೀಪ್ಯಾಡ್ ಫೋನ್ಗಳು ಮತ್ತು ಒಂದು ಚಾರ್ಜರ್ ಪತ್ತೆಯಾಗಿವೆ.

ಜೈಲಿನಲ್ಲಿ ಮೊಬೈಲ್ ಫೋನ್ಗಳು ನಿಷೇಧಿತ ವಸ್ತುಗಳಾಗಿದ್ದು, ಈ ಬಗ್ಗೆ ಅಪರಿಚಿತರ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಡಿ.17ರ ರಾತ್ರಿ ನಡೆದಿದ್ದ ತಪಾಸಣೆ ವೇಳೆ 4 ಕೀಪ್ಯಾಡ್ ಮೊಬೈಲ್ ಫೋನ್ಗಳು ಸಿಕ್ಕಿದ್ದವು ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.