ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಪಾಲಿಟೆಕ್ನಿಕ್‌ಗೆ ಪ್ರಥಮ ಬಹುಮಾನ

ರಾಜ್ಯಮಟ್ಟದ ತಾಂತ್ರಿಕ ಪ್ರಾಜೆಕ್ಟ್‌ ಪ್ರದರ್ಶನ–ಸ್ಪರ್ಧೆ
Last Updated 4 ಏಪ್ರಿಲ್ 2019, 13:37 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿ.ಡಿ.ಐ.ಟಿ.) ಹಮ್ಮಿಕೊಂಡಿದ್ದ ‘ಇನ್ನೊವಿಷನ್‌’ ಪ್ರಾಜೆಕ್ಟ್‌ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿಬಳ್ಳಾರಿಯಸಂಜಯಗಾಂಧಿ ಪಾಲಿಟೆಕ್ನಿಕ್ ತಂಡ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ.

ಪಾಲಿಟೆಕ್ನಿಕ್‌ನ ರಾಘವೇಂದ್ರ ಮತ್ತು ಅವರ ತಂಡದವರು ಸೌರಶಕ್ತಿ ಮತ್ತು ಪೆಟ್ರೋಲ್‌ ಚಾಲಿತ ಹೈಬ್ರಿಡ್‌ ಕಾರು ತಯಾರಿಸಿ ಪ್ರಸ್ತುತಪಡಿಸಿದ್ದರು. ಗುರುತ್ವ ದೀಪಕ್ಕಾಗಿ ಬಳ್ಳಾರಿಯ ಆರ್‌.ವೈ.ಎಂ.ಇ.ಸಿ.ಯ ಮುಷಾಹಿರಾ ಮತ್ತು ತಂಡ ದ್ವಿತೀಯ ಬಹುಮಾನಕ್ಕೆ ಪಾತ್ರವಾದರೆ, ನೆಲದಿಂದ ಆಲೂಗಡ್ಡೆ ತೆಗೆಯುವ ಯಂತ್ರ ತಯಾರಿಸಿದ ಪಿ.ಡಿ.ಐ.ಟಿ.ಯ ಲಕ್ಷ್ಮಿಕಾಂತ ಮತ್ತು ತಂಡ ತೃತೀಯ ಬಹುಮಾನ ಗಳಿಸಿದೆ.

ಅಂತರ್ಜಾಲ ಆಧಾರಿತ ಜಲಕೃಷಿಗಾಗಿ ಬಳ್ಳಾರಿಯ ಆರ್‌.ವೈ.ಎಂ.ಇ.ಸಿ.ಯ ಮಂಜುಳಾ ಮತ್ತು ತಂಡ, ಅಡಚಣೆ ಗ್ರಹಿಸುವ ರೊಬೋಟ್‌ಗಾಗಿ ಸಿರುಗುಪ್ಪ ಪಾಲಿಟೆಕ್ನಿಕ್‌ನ ಬಾಲಾಜಿ ಮತ್ತು ತಂಡ, ಸ್ಮಾರ್ಟ್ ಹೆಲ್ಮೆಟ್ ತಯಾರಿಸಿರುವ ಹುಲಕೋಟಿ ಪಾಲಿಟೆಕ್ನಿಕ್‌ನ ಸೋಮಲಿಂಗಪ್ಪ ಮತ್ತು ತಂಡ, ಸೂರ್ಯನ ಪಥ ಅನುಸರಿಸುವ ಸೌರಫಲಕ- ಪಿ.ಡಿ.ಐ.ಟಿ.ಯ ಶ್ರೀಧರ ಮತ್ತು ತಂಡ, ಕೈಯಿಂದ ಚಲಿಸುವ ರುಬ್ಬುವ ಯಂತ್ರ - ಬಳ್ಳಾರಿ ಪಾಲಿಟೆಕ್ನಿಕ್‌ನ ಗಣೇಶ ಮತ್ತು ತಂಡ, ಸೂಚನೆ ಆಧರಿಸಿ ವಸ್ತುಗಳನ್ನು ಎತ್ತಿಡುವ ರೊಬೋಟ್ - ಬಳ್ಳಾರಿ ಆರ್‌.ವೈ.ಎಂ.ಇ.ಸಿ.ಯ ಉಮೇಶ ಮತ್ತು ತಂಡ, ಒಳಚರಂಡಿ ನೀರಿನ ಸಂಸ್ಕರಣೆ ಮತ್ತು ವಿದ್ಯುತ್ ಉತ್ಪಾದನೆ - ದಾವಣಗೆರೆ ಜಿ.ಎಂ.ಐ.ಟಿ.ಯ ಸಾಗರ್ ಮತ್ತು ತಂಡ, ತ್ಯಾಜ್ಯದಿಂದ ಶಕ್ತಿಯನ್ನು ಉತ್ಪಾದಿಸುವುದು - ಜಿ.ಎಂ.ಐ.ಟಿ.ಯ ಚೇತನ ಕೆ.ಎಂ. ಮತ್ತು ತಂಡ, ಅಂತರ್ಜಲದ ಎಲೆಕ್ಟ್ರೋಲೈಟ್ ಫ್ಲೋರೈಡೀಕರಣ - ಮುಧೋಳ ಬಿ.ಜಿ.ಎಂ.ಐ.ಟಿ.ಯ ಸುಮಾ ಎಸ್. ಜಾಧವ ಮತ್ತು ತಂಡ ಹಾಗೂ ಪಾಚಿಯಿಂದ ಬಯೊಡೀಸೆಲ್‌ ಉತ್ಪಾದನೆ - ಬೆಂಗಳೂರಿನ ನವೀನ ಮತ್ತು ತಂಡ ಸಮಾಧಾನಕರ ಬಹುಮಾನ ಗಳಿಸಿದೆ.

ಪ್ರಥಮ ಬಹುಮಾನ ₹10 ಸಾವಿರ ನಗದು, ₹5 ಸಾವಿರ ದ್ವಿತೀಯ ಹಾಗೂ ₹3 ಸಾವಿರ ತೃತೀಯ ಬಹುಮಾನವನ್ನು ವಿಜೇತ ತಂಡಕ್ಕೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ ಪ್ರದಾನ ಮಾಡಿದರು.

ಒಟ್ಟು 106 ಪ್ರಾಜೆಕ್ಟ್‌ಗಳು ಪ್ರದರ್ಶನದಲ್ಲಿ ಪ್ರದರ್ಶನಗೊಂಡವು. ಪ್ರಾಜೆಕ್ಟ್ ಸ್ಫರ್ಧೆಯ ನಿರ್ಣಾಯಕರಾಗಿ ಬೆಂಗಳೂರಿನ ಕೇಂಬ್ರಿಜ್ ತಾಂತ್ರಿಕ ಕಾಲೇಜಿನ ವಿ.ಆರ್.ಕಬಾಡಿ, ಜೆ.ಎಸ್.ಡಬ್ಲೂ.ನ ಎಂಜಿನಿಯರ್ ಪಿ.ಎನ್.ಮಲ್ಲಿಕಾರ್ಜುನ, ಬೆಂಗಳೂರಿನ ವೋಲ್ಟ್ ಸ್ಪೇಸ್ ಸಂಸ್ಥೆಯ ಎ.ಲಕ್ಷ್ಮಣನ್ ಭಾಗವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ, ಗೋನಾಳ್ ರಾಜಶೇಖರ ಗೌಡ, ಪ್ರಾಂಶುಪಾಲ ಎಸ್.ಎಂ.ಶಶಿಧರ್, ಕಾರ್ಯಕ್ರಮ ಸಂಯೋಜಕ ಮಧ್ವರಾಜ, ಅಲ್ಗೂರು ವೀರಭದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT