ಕಂಪ್ಲಿ: ‘ಕಂಪ್ಲಿ ಮತ್ತು ಕುರುಗೋಡು ಪಟ್ಟಣದಲ್ಲಿ ಪ್ರತ್ಯೇಕ ಬಿಇಒ ಕಚೇರಿ ಆರಂಭಿಸಲು ಸರ್ಕಾರಕ್ಕೆ ಮತ್ತೆ ಪ್ರಸ್ತಾವ ಸಲ್ಲಿಸುವಂತೆ ಕಲಬುರಗಿ ಶಾಲಾ ಶಿಕ್ಷಣ ಆಯುಕ್ತರಿಗೆ ಸೂಚಿಸಿರುವುದಾಗಿ’ ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.

ತಾಲ್ಲೂಕಿನ ಚಿನ್ನಾಪುರ, ಪ್ರಭುಕ್ಯಾಂಪ್, ಅಂಜನಾಪುರದಲ್ಲಿ ತಲಾ ₹50ಲಕ್ಷ ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ, ಈ ಕುರಿತಂತೆ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ಮಾಡಿರುವುದಾಗಿ ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ ಅಳವಡಿಸಬೇಕು. ಜೊತೆಗೆ ರೈತರಿಗೆ ಎರಡನೇ ಬೆಳೆ ಬೆಳೆಯಲು ನೀರು ಪೂರೈಸುವಂತೆ ಮುಂಬರುವ ಮಳೆಗಾಲ ಅಧಿವೇಶನದಲ್ಲಿ ಚರ್ಚಿಸುತ್ತೇನೆ. ಜಲಾಶಯದ ಅಧಿಕಾರಿಗಳು ಈ ಸಾಲಿನಲ್ಲಿ ಒಂದೇ ಬೆಳೆಗೆ ನೀರು ಬಿಡಲಾಗುವುದು ಎಂದು ಹೇಳುತ್ತಿದ್ದಾರೆ. ಅದರಿಂದ ರೈತರು ಆತಂಕದಲ್ಲಿದ್ದಾರೆ. ನವೆಂಬರ್ ತಿಂಗಳಲ್ಲಿ 60ಟಿಎಂಸಿ ನೀರು ಸಂಗ್ರಹವಿದ್ದರೂ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಸರಬರಾಜು ಮಾಡಬಹುದು. ಈ ಕುರಿತು ಸಂಬಂಧಿಸಿದ ಸಚಿವರಿಗೂ ಮನವರಿಕೆ ಮಾಡುವುದಾಗಿ ತಿಳಿಸಿದರು.

ಕಂಪ್ಲಿ ಕ್ಷೇತ್ರದಲ್ಲಿ ಜೋಳ ಬೆಳೆ ಸಮೀಕ್ಷೆ ಸರ್ಮಪಕವಾಗಿ ನಡೆಯ ಕಾರಣ ಸರ್ಕಾರ ರೈತರ ಜೋಳ ಖರೀದಿಸುವಲ್ಲಿ ತೊಂದರೆಯಾಗಿದೆ. ರೈತರು ಬೆಳೆದ ಪೂರ್ಣ ಪ್ರಮಾಣದ ಜೋಳ ಖರೀದಿಸಬೇಕು. ಅಲ್ಲದೆ ಸಣ್ಣ, ಪುಟ್ಟ ಲೋಪದೋಷಗಳನ್ನು ಸರಿಪಡಿಸಿ, ಷರತ್ತುಗಳನ್ನು ಸಡಿಲಿಸಿ ಜೋಳ ಕೊಂಡುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷ ಶ್ರೀನಿವಾಸ, ಸದಸ್ಯರಾದ ಎಚ್. ಕುಮಾರಸ್ವಾಮಿ, ತಿಮ್ಮಪ್ಪ, ರಾಮಲಿಸ್ವಾಮಿ, ಉಮೇಶ, ನೇಣ್ಕಿ ಗಿರೀಶ, ಕೊರವರ ಈರಣ್ಣ ಪ್ರಮುಖರಾದ ಪರಶುರಾಮ, ಭಾಸ್ಕರ, ಡಿಶ್ ಪ್ರಸಾದ್, ಶೇಖರ್, ಹೊನ್ನೂರಸ್ವಾಮಿ, ವೀರಭದ್ರಗೌಡ, ರಾಜನಗೌಡ, ಎನ್. ಮಲ್ಲಿಕಾರ್ಜುನ, ಸಿದ್ದಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.