ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಅನುಭವ ಮಂಟಪ ವೈಭವ ಪುನರ್‌ಸ್ಥಾಪನೆಯಾಗಲಿ: ರವಿ

ಬಸವಕಲ್ಯಾಣದ ಪೀರ್‌ಪಾಷಾ ಬಂಗ್ಲಾ ಪ್ರಕರಣ
Published 1 ಫೆಬ್ರುವರಿ 2024, 15:41 IST
Last Updated 1 ಫೆಬ್ರುವರಿ 2024, 15:41 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಸವಣ್ಣನವರು ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಮೂಲ ಅನುಭವ ಮಂಟಪ ಈಗ ಪೀರ್ ಪಾಷಾ ಬಂಗ್ಲಾ ಎಂದಾಗಿದೆ. ಅದರ ಗತವೈಭವ ಪುನರ್‌ ಸ್ಥಾಪನೆ ಆಗಬೇಕಿದೆ’ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.  

ಇಲ್ಲಿ ಗುರುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಆದರೆ, ಅವರ ಆಶಯ ಪಾಲಿಸಬೇಕಿದ್ದರೆ, ಮೂಲ ಅನುಭವ ಮಂಟಪದ ವೈಭವ ಪುನರ್‌ ಸ್ಥಾಪಿಸಬೇಕು. ಅದಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು’ ಎಂದರು.

‘ಈ ಸಲದ ಲೋಕಸಭಾ ಚುನಾವಣೆ ರಾಮ ಮತ್ತು ಬಾಬರ್‌ ನಡುವೆ ನಡೆಯುತ್ತದೆ. ಬಾಬರ್‌ ಪರ ಇದ್ದ ಕಾಂಗ್ರೆಸ್‌, ರಾಮ ಕಾಲ್ಪನಿಕ ವ್ಯಕ್ತಿ ಎಂದಿತ್ತು. ಆದರೆ, ನಾವು ರಾಮನ ಪರ ಇದ್ದೆವು. ಕಾಂಗ್ರೆಸ್‌ನವರಿಂದ ರಾಮ ಮಂದಿರ ನಿರ್ಮಾಣ ಇಷ್ಟು ತಡವಾಯಿತು. ಈಗ ಅವರು ಕೂಡ ಜೈ ಶ್ರೀರಾಮ ಎನ್ನುತ್ತಿದ್ದಾರೆ’ ಎಂದರು.

‘ಈ ಸಲದ ಚುನಾವಣೆ ರಾಮ ಮತ್ತು ಬಾಬರ್ ನಡುವೆ ಅಷ್ಟೇ ಅಲ್ಲ, ಕಾಶಿ ವಿಶ್ವನಾಥ ಮತ್ತು ಔರಂಗಜೇಬ್‌, ಸೋಮನಾಥ ಮತ್ತು ಘಜ್ನಿ ಮೊಹಮ್ಮದ್, ಹನುಮಾನ ಮತ್ತು ಟಿಪ್ಪು ಸುಲ್ತಾನ್ ನಡುವಿನ ಚುನಾವಣೆಯೂ ಹೌದು. ಕಾಶಿಯಲ್ಲಿ ವಿಶ್ವನಾಥ ಮಂದಿರ, ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣಕ್ಕೆ ಮೋದಿ ಮತ್ತೆ ಪ್ರಧಾನಿ ಆಗಬೇಕು’ ಎಂದರು.

ಸಿ.ಟಿ.ರವಿ
ಸಿ.ಟಿ.ರವಿ

- ‘ದೇಶದಲ್ಲಿ ಕಾಂಗ್ರೆಸ್‌ ಗೆಲ್ಲೋದು 20 ಸ್ಥಾನ’

ಬಳ್ಳಾರಿ: ‘ಲೋಕಸಭಾ ಚುವಾಣೆಯಲ್ಲಿ ಇಡೀ ದೇಶದಲ್ಲಿ 20 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಕರ್ನಾಟಕ ತಮಿಳುನಾಡು ಕೇರಳದಲ್ಲಿ ಕಳೆದ ಬಾರಿ ಬೋನಸ್ ಎಂಬಂತೆ ಕಾಂಗ್ರೆಸ್ ಒಂದೆರಡು ಕ್ಷೇತ್ರ ಗೆದ್ದಿತ್ತು. ಈಗ ಅದನ್ನೂ ಗೆಲ್ಲುವುದಿಲ್ಲ’ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು. ‘ಲಕ್ಷಣ ಸವದಿ ಸೇರಿ ದೇಶ ಮುಖ್ಯ ಎನ್ನುವವರು ಬಿಜೆಪಿಗೆ ಬರಬೇಕು. ಅಧಿಕಾರದ ಆಸೆ ಇಲ್ಲದೇ ದೇಶ ಮುಖ್ಯ ಎನ್ನುವವರು ಬಿಜೆಪಿಗೆ ಬನ್ನಿ. ಜನಾರ್ದನ ರೆಡ್ಡಿ ಬಿಜೆಪಿಗೆ ಮರಳುವ ವಿಷಯವನ್ನು ಕಾಲವೇ ನಿರ್ಧರಿಸಲಿದೆ’ ಎಂದರು.

ಬಳ್ಳಾರಿಯಲ್ಲಿ ಶ್ರೀರಾಮುಲು ಗೆಲ್ತಾರೆ: ಸೋಮಶೇಖರ ರೆಡ್ಡಿ

ಬಳ್ಳಾರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತದಿಂದ ಶ್ರೀರಾಮುಲು ಗೆಲ್ಲುತ್ತಾರೆ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.   ಪಕ್ಷ ಬಿಟ್ಟು ಹೋದವರೆಲ್ಲರೂ ಶೀಘ್ರವೇ ಪಕ್ಷಕ್ಕೆ ಸೇರಲಿದ್ದಾರೆ ಎಂದೂ ಅವರು ಇದೇ ವೇಳೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT