ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಿತ್ರ ಶಿಶು ಜನನ

Last Updated 26 ಜೂನ್ 2018, 14:03 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾತ್ರಿ ಮೂರು ಕಾಲು ಮತ್ತು ನಾಲ್ಕು ಪಾದವಿರುವ ವಿಚಿತ್ರ ಗಂಡು ಮಗು ಜನಿಸಿದೆ.


ಈ ಕುರಿತು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಮೋಹನ ಮಾತನಾಡಿ, ‘ಮಗು ೩.೪೦೦ಕಿ.ಗ್ರಾಂ ಇದ್ದು, ಆರೋಗ್ಯವಾಗಿದೆ. ಮಗುವಿನ ತಲೆ, ಬಾಯಿ, ಕಣ್ಣು, ಕತ್ತು, ಎಡಗಾಲು, ಬೆರಳುಗಳು ಸಾಮಾನ್ಯವಾಗಿವೆ. ಆದರೆ ಬಲಗಾಲಿನ ಪಕ್ಕದಲ್ಲಿಯೇ ಮತ್ತೊಂದು ಕಾಲು ಬೆಳೆದಿದ್ದು ಎರಡು ಪಾದಗಳನ್ನು ಒಳಗೊಂಡಿದೆ. ಹೀಗಾಗಿ ಮೂರು ಕಾಲು ಮತ್ತು ನಾಲ್ಕು ಪಾದ ಕಂಡು ಬರುತ್ತದೆ. ಮೂಳೆ ತಜ್ಞರಲ್ಲಿ ಮಗುವನ್ನು ಪರೀಕ್ಷಿಸಿ ಕಾಲು ಸರಿಪಡಿಸುವ ಹಾಗೂ ಹೆಚ್ಚುವರಿಯಾಗಿ ಬೆಳೆದ ಕಾಲುಗಳ ಬಗ್ಗೆ ವಿಚಾರಿಸಲಾಗುವುದು. ಮಗು ಕನಿಷ್ಠ 10ಕೆ.ಜಿ ತೂಕ ಹೊಂದಿದ ನಂತರ ಶಸ್ತ್ರ ಚಿಕಿತ್ಸೆಗೆ ಅನುಕೂಲವಾಗಬಹುದು. ಪ್ರಸ್ತುತ ಮಗುವಿನ ತಾಯಿ, ತಂದೆ ಸಂಬಂಧಿಕರಾಗಿರುವುದರಿಂದ ಈ ರೀತಿ ಮಗುವಿನ ಜನನವಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT