ಹಂಪಿ (ವಿಜಯನಗರ): ಹಂಪಿ ಉತ್ಸವದ ಅಂಗವಾಗಿ ಇಲ್ಲಿನ ವಿರೂಪಾಕ್ಷೇಶ್ವರ ದೇಗುಲ ಮುಂದಿನ ರಾಜ ಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಿಂದಾಗಿ ಗೋಪುರದ ಮುಂಭಾಗದ ರಸ್ತೆ ವರ್ಣಮಯವಾಗಿ ನೋಡುಗರ ಕಣ್ಮನ ಸೆಳೆದವು. ಉತ್ಸವಕ್ಕೆ ಬಂದವರನ್ನು ರಂಗೋಲಿ ಸ್ವಾಗತಿಸುವಂತಿದ್ದವು.

ದೇವರ ಚಿತ್ರಗಳು, ವಿರೂಪಾಕ್ಷೇಕ್ಷರ ಗೋಪುರ ಸೇರಿ ವಿವಿಧ ರಥ, ನಕ್ಷೆ, ನಾನಾ ಬಗೆಯ ಚಿತ್ರ ಸೇರಿದಂತೆ ನಯನ ಮನೋಹರ ರಂಗೋಲಿಗಳ ಚಿತ್ತಾರ ಹಾಕಿ ಬಣ್ಣತುಂಬಿ ಅಂದ ಹೆಚ್ಚಿಸಿದರು. ಇವುಗಳಲ್ಲಿ ಹೆಣ್ಣು ಭ್ರೂಣ ಊಳಿಸಿ ಎಂದು ಬರೆದಿದ್ದ ರಂಗೋಲಿ ಹಾಗೂ ಶ್ರೀಕೃಷ್ಣ ದೇವರಾಯ ಭಾವಚಿತ್ರವಿರುವ ಸಿಂಹ ಮುಖದ ರಂಗೋಲಿ ಎಲ್ಲರ ಗಮನ ಸೆಳೆದವು. ಶಿವರಾತ್ರಿ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿವಲಿಂಗ ಇರುವ ರಂಗೋಲಿಗಳನ್ನು ಬಿಡಿಸಿದ್ದರು.

ರಸ್ತೆ ಮೇಲೆ ಅರಳಿದ ರಂಗೋಲಿಗಳ ಚಿತ್ತಾರ ನೋಡಿ ಉತ್ಸವಕ್ಕೆ ಬಂದಿದ್ದ ಪ್ರವಾಸಿಗರು ಸಂತಸಗೊಂಡರು. ವಿದೇಶಿಗರು ಸೇರಿ ಗ್ರಾಮೀಣ ಭಾಗದಿಂದ ಬಂದಂತಹ ಪ್ರವಾಸಿಗರನ್ನು ರಂಗೋಲಿಗಳು ಅಕರ್ಷಿಸಿದವು. ವಿದೇಶಿ ಪ್ರವಾಸಿಗಳು ಬಣ್ಣ ಬಣ್ಣದ ರಂಗೋಲಿಗಳನ್ನು ನೋಡಿ ಮೊಬೈಲ್ಗಳಲ್ಲಿ ಚಿತ್ರ ಸೆರೆ ಹಿಡಿದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.