ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರನ್ನು ತಾಯಿ ಮತ್ತು ಅಕ್ಕನ ಕುಟುಂಬಸ್ಥರು ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾದರು.
ಕಾರಾಗೃಹದ ಸಂದರ್ಶಕರ ಕೊಠಡಿಯಲ್ಲಿ ತಾಯಿ ಮೀನಾ, ಅಕ್ಕ ದಿವ್ಯಾ, ಭಾವ ಮಂಜುನಾಥ್ ಮತ್ತು ಅವರ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್ ಅವರನ್ನು ದರ್ಶನ್ ಭೇಟಿಯಾದರು. ಕೆಲ ಹೊತ್ತು ಮಾತುಕತೆ ನಡೆಸಿದ ಕುಟುಂಬಸ್ಥರು, ಹಣ್ಣುಹಂಪಲು ಮತ್ತು ಬೇಕರಿ ಪದಾರ್ಥಗಳನ್ನು ನೀಡಿದರು.
ದರ್ಶನ್ ತಮಗೆ ಹಾಸಿಗೆ, ದಿಂಬು, ಕುರ್ಚಿ ಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ, ನಿಯಮಗಳನ್ನು ಉಲ್ಲಂಘಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.