ಕುಡತಿನಿ (ಸಂಡೂರು): ಪಟ್ಟಣದ ಗ್ರಂಥಾಲಯದ ಆವರಣದಲ್ಲಿರುವ ಮಹಾತ್ಮ ಗಾಂಧಿಯ ನೂತನ ಸ್ಮಾರಕದ ಕಟ್ಟಡ ಕಾಮಗಾರಿಯು ಅಧಿಕಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳಪೆಯಾಗಿದೆ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿಯ ಸದಸ್ಯರು, ಮುಖಂಡರು ಕಾಮಗಾರಿಯ ಸ್ಥಳದಲ್ಲಿ ಗುರುವಾರ ಕೆಲಕಾಲ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿ 5ನೇ ವಾರ್ಡ್ನ ಸದಸ್ಯ ಕೆ.ಎಂ. ಹಾಲಪ್ಪ ಮಾತನಾಡಿ, ‘ಕಟ್ಟಡಕ್ಕೆ ಸಕಾಲಕ್ಕೆ ಕ್ಯೂರಿಂಗ್ ಮಾಡಿಲ್ಲ. ಈ ವಿಚಾರವಾಗಿ ಪಂಚಾಯಿತಿಯ ಮುಖ್ಯಾಧಿಕಾರಿ ಬಳಿ ಚರ್ಚಿಸಿದರೆ ಉಡಾಫೆಯಾಗಿ ಉತ್ತರ ನೀಡುತ್ತಿದ್ದಾರೆ. ಸ್ಮಾರಕದ ಸುತ್ತಲೂ ದನ ಕರುಗಳು ಬರದಂತೆ ಕಬ್ಬಿಣದ ಗ್ರಿಲ್ ಅಳವಡಿಸಬೇಕು’ ಎಂದರು.

‘ಗಾಂಧೀಜಿ ನೂತನ ಸ್ಮಾರಕದ ಕಟ್ಟಡ ಕಾಮಗಾರಿಯನ್ನು ಖಾಸಗಿ ಕಂಪನಿಯ ₹10ಲಕ್ಷ ವೆಚ್ಚದ ಅನುದಾನದಲ್ಲಿ ನಿರ್ಮಿಸುತ್ತಿದೆ. ಕಾಮಗಾರಿ ಕಳಪೆಯಾಗದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ತಿಳಿಸಿದರು.

ಪಂಚಾಯಿತಿಯ ಸದಸ್ಯರಾದ ಸಿ.ಡಿ.ದುಗ್ಗೆಪ್ಪ, ಬಿ.ಕೆ.ಲೆನಿನ್, ಮುಖಂಡರಾದ ರಾಮಚಂದ್ರಪ್ಪ, ರಾಮಕೃಷ್ಣ, ಸಾಯಿಬಣ್ಣ, ಎರ್ರಿಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.