ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕ್ಷೇತ್ರದಲ್ಲಿ ಅತ್ಯಧಿಕ ಮತ ತನ್ನಿ: ಕೃಷ್ಣ‌ಬೈರೇಗೌಡ‌

Last Updated 22 ಅಕ್ಟೋಬರ್ 2018, 10:18 IST
ಅಕ್ಷರ ಗಾತ್ರ

ಬಳ್ಳಾರಿ:ಗ್ರಾಮೀಣ‌ ಕ್ಷೇತ್ರದಲ್ಲಿ 2011ರಲ್ಲಿ ನಡೆದ ಉಪಚುನಾವಣೆಯಲ್ಲಿ‌ಮತ್ತು‌ ವಿಧಾನಸಭೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಿದ ರೀತಿಯಲ್ಲೇ‌ ಲೋಕಸಭೆ ಉಪಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಲು‌ ಕಾರ್ಯಕರ್ತರು ದುಡಿಯಬೇಕು ಎಂದು‌ ಸಚಿವ ಕೃಷ್ಣ‌ಬೈರೇಗೌಡ‌ ಕರೆ ನೀಡಿದರು.

ನಗರದಲ್ಲಿ‌ ಸೋಮವಾರ ‌ಗ್ರಾಮೀಣ ‌ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,ಬಿಜೆಪಿಯ ಶ್ರೀರಾಮುಲು‌‌ ರಾಜೀನಾಮೆ ನೀಡಿದ್ದರಿಂದಲೇ ಗ್ರಾಮೀಣ ‌ಕ್ಷೇತ್ರದಲ್ಲಿ‌ ಉಪ‌ಚುನಾವಣೆ ಬಂದಿತ್ತು. ಈ‌ ಬಾರಿ‌ ಲೋಕಸಭೆ ಉಪ‌ಚುನಾವಣೆಯೂ‌ ಶ್ರೀರಾಮುಲು‌ ರಾಜೀನಾಮೆಯಿಂದಲೇ ಬಂದಿದೆ. ಹೀಗಾಗಿ ಈ ಬಾರಿಯೂ ಬಿಜೆಪಿ ಗೆಲ್ಲಲು ಬಿಡಬಾರದು ಎಂದು ಪ್ರತಿಪಾದಿಸಿದರು.

ಬಿಜೆಪಿ‌ ನೇತೃತ್ವದಲ್ಲಿ ‌ಕೇಂದ್ರದಲ್ಲಿ‌ ಅಧಿಕಾರಕ್ಕೆ ಬಂದ ಸರ್ಕಾರ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ‌ ವಿಫಲವಾಗಿದೆ ಎಂದು ದೂರಿದರು.

ಖರೀದಿಸಲು ಅಸಾಧ್ಯ: ನನ್ನನ್ನು ಯಾರಿಂದಲೂ ಖರೀದಿಸಲು‌ ಅಸಾಧ್ಯ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಪ್ರತಿಪಾದಿಸಿದರು.
ಕಾಂಗ್ರೆಸ್ ‌ನಿಂದ ಹೊರಹೋಗುವ ಪ್ರಶ್ನೆಯೇ ಇಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಅತ್ಯಧಿಕ ಮತ ಗಳಿಸಿಕೊಡುವೆ ಎಂದು ಭರವಸೆ‌ ನೀಡಿದರು.

ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಸಚಿವ ಎಚ್.ಎಂ.ರೇವಣ್ಣ, ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಫೀಕ್ ಅಹ್ಮದ್, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್. ಆಂಜನೇಯುಲು ಮಾತನಾಡಿದರು.ಅಲ್ಲಂ ಪ್ರಶಾಂತ್, ಪದ್ಮಾವತಿ, ಕಮಲಾ ಮರಿಸ್ವಾಮಿ, ಅಸುಂಡಿ ನಾಗರಾಜ್ ಇದ್ದರು.

ಕಾಂಗ್ರೆಸ್‌ ಗೆಲುವು ನಿಶ್ಚಿತ:ಕೆ.ಎಚ್.ಮುನಿಯಪ್ಪ

ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ತೆಲಂಗಾಣದಲ್ಲೂ ಗೆಲ್ಲುವ ಸಾಧ್ಯತೆಗಳಿವೆ‌ ಎಂದು ಸಂಸದ ಕೆ.ಎಚ್.ಮುನಿಯಪ್ಪ ನಗರದಲ್ಲಿ‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ಪಟ್ಟರು ‌

ಸಾರ್ವತ್ರಿಕ ಚುನಾವಣೆಗೆ ಪ್ರಾಯೋಗಿಕವಾಗಿ ಉಪ ಚುನಾವಣೆಗಳು ನಡೆಯುತ್ತಿವೆ. ಬಿಎಸ್ಪಿ ನಾಯಕಿ ಮಾಯಾವತಿ ಕಾಂಗ್ರೆಸ್ ಸಖ್ಯ ತೊರೆದಿರುವುದರಿಂದ ರಾಜ್ಯದಲ್ಲಿ ಯಾವುದೇ ಪರಿಣಾಮ ಇಲ್ಲ ಎಂದರು.

ಉತ್ತರ ಪ್ರದೇಶದಲ್ಲಿ ಮಾಯಾವತಿ ಕೇಳಿದಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೆವು. ಆದರೂ ಮಾಯಾವತಿ ಕಾಂಗ್ರೆಸ್ಸಿನಿಂದ ದೂರ ಸರಿದರು. 2019ರ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್ ಜತೆ ಕೈ ಜೋಡಿಸಬಹುದು ಎಂಬ ವಿಶ್ವಾಸ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT