ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪವರ್‌ ಲಿಫ್ಟಿಂಗ್‌ನಲ್ಲಿ ಉತ್ತಮ ಸಾಧನೆ

ಫಾಲೋ ಮಾಡಿ
Comments

ಹೊಸಪೇಟೆ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪವರ್‌ ಲಿಫ್ಟಿಂಗ್‌ ಬೆಂಚ್‌ ಪ್ರೆಸ್‌ ಸ್ಪರ್ಧೆಯಲ್ಲಿ ನಗರದ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿ, ಪ್ರಶಸ್ತಿ ಜಯಿಸಿದ್ದಾರೆ.

53 ಕೆ.ಜಿ. ವಿಭಾಗದಲ್ಲಿ ಗೌಸ್‌ ಪೀರ್‌ ದ್ವಿತೀಯ, 47 ಕೆ.ಜಿ. ವಿಭಾಗದಲ್ಲಿ ಉಷಾ ರೋಹಿಣಿ ಪ್ರಥಮ, 84 ಕೆ.ಜಿ. ಹಿರಿಯರ ವಿಭಾಗದಲ್ಲಿ ವಿಜಯವಾಣಿ ದ್ವಿತೀಯ ಸ್ಥಾನ, ಮಾಸ್ಟರ್ಸ್‌ ಎಂ. 1.93 ಕೆ.ಜಿ. ವಿಭಾಗದಲ್ಲಿ ಎ. ಅರುಣ್‌ ಕುಮಾರ್‌ ಪ್ರಥಮ, ಮಾಸ್ಟರ್ಸ್‌ ಎಂ. 1.120 ಕೆ.ಜಿ. ವಿಭಾಗದಲ್ಲಿ ರಾಜೇಶ್‌ ಜಿ. ಸುತ್ರಾವೆ ಉತ್ತಮ ಪ್ರದರ್ಶನ ತೋರಿದ್ದಾರೆ.

ಎಲ್ಲಾ ಕ್ರೀಡಾಪಟುಗಳು ನ. 23ರಿಂದ 27ರ ವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಬೆಂಚ್‌ ಪ್ರೆಸ್‌ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳ ಸಾಧನೆಗೆಬಳ್ಳಾರಿ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಹೊನ್ನೂರ್ ಸಾಬ್, ಮೆಹಬೂಬ್, ಸುರೇಂದ್ರ, ಅಮೀರ್ ಜಾನ್, ವಲಿಬಾಷ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT