ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ: ಗುಡುಗು ಸಹಿತ ಉತ್ತಮ ಮಳೆ

Published 14 ಆಗಸ್ಟ್ 2024, 15:41 IST
Last Updated 14 ಆಗಸ್ಟ್ 2024, 15:41 IST
ಅಕ್ಷರ ಗಾತ್ರ

ಅರಸೀಕೆರೆ: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

ಮಳೆಯ ಆರ್ಭಟಕ್ಕೆ ಹಳ್ಳ, ಗೋಕಟ್ಟೆಗಳು, ತಗ್ಗು ಪ್ರದೇಶದ ಹೊಲಗಳು ಜಲಾವೃತಗೊಂಡಿದೆ. ಚಿಕ್ಕಮೆಗಳಗೆರೆ, ಬೇವಿನಹಳ್ಳಿ ಗ್ರಾಮದ ಕೆರೆಗಳಿಗೆ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಳೆಗೆ ರಭಸಕ್ಕೆ ಹಿರೇಮೆಗಳಗೆರೆ ರಸ್ತೆಯಲ್ಲಿ ಮರವೊಂದು ಬಿದ್ದಿದೆ. ಕಾಡಜ್ಜಿ ರೈತರೊಬ್ಬರು ಎಕರೆ ಹೊಲದಲ್ಲಿ ಬೆಳೆದ ಟೊಮೋಟೊ ಬೆಳೆ ನೆಲಕಚ್ಚಿದೆ. ನಾಗತಿಕಟ್ಟೆ ತಾಂಡಾ ಹೊರವಲಯದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ಚಾಪೆ ಹಾಸಾಗಿದೆ.

ಕಂಚಿಕೆರೆ, ಅರಸೀಕೆರೆ ಗ್ರಾಮಗಳಲ್ಲಿ ಸೀಡ್ಸ್ ಬೆಳೆಗೆ ಹಾಕಲಾಗಿದ್ದ ಪರದೆ ಹರಿದು ಬಿದ್ದಿದೆ.

ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಿಡಿಲು ಸಹಿತ ಸುರಿದ ಮಳೆಗೆ ಪೋತಲಕಟ್ಟೆ ಗ್ರಾಮದ ಗೋಕಟ್ಟೆ ತುಂಬಿ ಹರಿಯುತ್ತಿದೆ
ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಿಡಿಲು ಸಹಿತ ಸುರಿದ ಮಳೆಗೆ ಪೋತಲಕಟ್ಟೆ ಗ್ರಾಮದ ಗೋಕಟ್ಟೆ ತುಂಬಿ ಹರಿಯುತ್ತಿದೆ
ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಿಡಿಲು ಸಹಿತ ಸುರಿದ ಮಳೆಗೆ ಕುರೇಮಾಗನಹಳ್ಳಿ ಗ್ರಾಮದ ಗೋಕಟ್ಟೆ ತುಂಬಿ ಹರಿಯುತ್ತಿದೆ
ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಿಡಿಲು ಸಹಿತ ಸುರಿದ ಮಳೆಗೆ ಕುರೇಮಾಗನಹಳ್ಳಿ ಗ್ರಾಮದ ಗೋಕಟ್ಟೆ ತುಂಬಿ ಹರಿಯುತ್ತಿದೆ
ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಿಡಿಲು ಸಹಿತ ಸುರಿದ ಮಳೆಗೆ ನಾಗತಿಕಟ್ಟೆ ಹೊರವಲಯದ ಹೊಲವೊಂದರಲ್ಲಿ ಮೆಕ್ಕೆಜೋಳ ಬೆಳೆ ನೆಲಕಚ್ಚಿದೆ
ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಿಡಿಲು ಸಹಿತ ಸುರಿದ ಮಳೆಗೆ ನಾಗತಿಕಟ್ಟೆ ಹೊರವಲಯದ ಹೊಲವೊಂದರಲ್ಲಿ ಮೆಕ್ಕೆಜೋಳ ಬೆಳೆ ನೆಲಕಚ್ಚಿದೆ
ಅರಸೀಕೆರೆ ಹೋಬಳಿಯ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಕಂಚಿಕೆರೆ ಮೆಸ್ (ಪರದೆ) ಹರಿದಿದೆ.
ಅರಸೀಕೆರೆ ಹೋಬಳಿಯ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಕಂಚಿಕೆರೆ ಮೆಸ್ (ಪರದೆ) ಹರಿದಿದೆ.
ಅರಸೀಕೆರೆ ಹೋಬಳಿಯ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಟೊಮೋಟೊ ಬೆಳೆ ನೆಲಕಚ್ಚಿದೆ
ಅರಸೀಕೆರೆ ಹೋಬಳಿಯ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಟೊಮೋಟೊ ಬೆಳೆ ನೆಲಕಚ್ಚಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT