ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ: ಹನುಮ ಮಾಲಾಧಾರಿಗಳಿಂದ ಶೋಭಾಯಾತ್ರೆ

Published 24 ಡಿಸೆಂಬರ್ 2023, 14:28 IST
Last Updated 24 ಡಿಸೆಂಬರ್ 2023, 14:28 IST
ಅಕ್ಷರ ಗಾತ್ರ

ಕೂಡ್ಲಿಗಿ: ಹನುಮ ಜಯಂತಿ ಅಂಗವಾಗಿ ಹನುಮ ಮಾಲಾಧಾರಿಗಳು ಪಟ್ಟಣದಲ್ಲಿ ಭಾನುವಾರ ಶೋಭಾಯಾತ್ರೆ ನಡೆಸಿದರು.

ಹನುಮ ಧ್ವಜ ಹಾಗೂ ಕೇಸರಿ ಧ್ವಜಗಳೊಂದಿಗೆ ಪಟ್ಟಣದ ಹೊರ ವಲಯದ ವಜ್ರ ಮುಷ್ಠಿ ಆಂಜನೇಯ ದೇವಸ್ಥಾನದಿಂದ ಶೋಭಾ ಯಾತ್ರೆ ಹೊರಟ ನೂರಾರು ಮಾಲಾಧಾರಿಗಳು ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಪಾದಗಟ್ಟೆ, ಮದಕರಿ ವೃತ್ತದ ಮೂಲಕ ಕೊತ್ತಲಾಂಜನೇಯ ದೇವಸ್ಥಾನ ತಲುಪಿದರು.

ಆನಂತರ ದೇವಸ್ಥಾನದಲ್ಲಿ ಹನುಮ ಪ್ರತಿಮೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಹಾ ಮಂಗಳಾರತಿ ಬೆಳಗಿದ ಮಾಲಾಧಾರಿಗಳು ರಾಮನಾಮ ಹಾಗೂ ಹನುಮ ಕೀರ್ತನೆಗಳನ್ನು ಹಾಡುತ್ತ ಮರಳಿ ವಜ್ರ ಮುಷ್ಟಿ ಅಂಜನೇಯ ದೇವಸ್ಥಾನದಲ್ಲಿ ಶೋಭಾಯಾತ್ರೆ ಸಂಪನ್ನಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT