ಬಳ್ಳಾರಿ: ‘ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣದಲ್ಲಿ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಇಬ್ಬರನ್ನೂ ಈ ಹೊತ್ತಿಗಾಗಲೇ ಪೊಲೀಸರು ಬಂಧಿಸಬೇಕಿತ್ತು. ಆದರೆ, ಅವರು ಕಾಲಹರಣ ಮಾಡುತ್ತಿದ್ದಾರೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭರತ್ ರೆಡ್ಡಿ ಅವರನ್ನು ವಾಲ್ಮೀಕಿ ವೃತ್ತದಿಂದ ನಮ್ಮ ಮನೆಯ ಬಳಿಗೆ ಪೊಲೀಸರೇ ಕರೆದುಕೊಂಡು ಬಂದರು. ಇಡೀ ಘಟನೆಗೆ ಪೊಲೀಸರೇ ಕಾರಣ. ನನ್ನ ಮನೆ ಸುಡುತ್ತೇನೆ ಎಂದು ಭರತ್ ರೆಡ್ಡಿ ಬಹಿರಂಗವಾಗಿ ಹೇಳಿದರೂ ಆತನನ್ನು ಪೊಲೀಸರು ಬಂಧಿಸಿಲ್ಲ. ಈಗ ಒಳ್ಳೆ ಅಧಿಕಾರಿಗಳು ಬಳ್ಳಾರಿಗೆ ಬಂದಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳಲಿ’ ಎಂದರು.

‘ನಾನು ಇತ್ತೀಚೆಗೆ ಕೊಟ್ಟ ಒಂದು ದೂರಿಗೆ ಪ್ರತಿಯಾಗಿ ಪೊಲೀಸರು ಇನ್ನೂ ಎಫ್ಐಆರ್ ಮಾಡಿಲ್ಲ. ಆದರೆ, ದೂರು ಪ್ರತಿಗೆ ನಾನು ಹಿಂಬರಹ ಪಡೆದಿದ್ದೇನೆ. ಎಫ್ಐಆರ್ ದಾಖಲಿಸದೇ ಹೋದರೆ, ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡುತ್ತೇನೆ. ಎಎಸ್ಪಿ ರವಿಕುಮಾರ್, ಡಿವೈಎಸ್ಪಿ ನಂದಾರೆಡ್ಡಿ ಹಾಗೂ ಭರತ್ ರೆಡ್ಡಿ ವಿರುದ್ಧ ದೂರು ಕೊಟ್ಟಿದ್ದೇನೆ. ಇಡೀ ಘಟನೆಗೆ ಇವರೇ ಕಾರಣ’ ಎಂದರು.

ತನಿಖೆಗೆ ರಾಜ್ಯ ಪೊಲೀಸರು ಸಮರ್ಥರಿದ್ದಾರೆ ಎಂಬ ಗೃಹ ಸಚಿವ ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, ‘ಗೃಹಸಚಿವರೇ ಅಸಮರ್ಥರಿದ್ದಾರೆ. ಇಡೀ ಕರ್ನಾಟಕವೇ ಇದನ್ನು ಹೇಳುತ್ತಿದೆ. ರಾಜ್ಯದ ಇತಿಹಾಸದಲ್ಲಿ ಒಬ್ಬ ಶಾಸಕನ ಮೇಲೆ ಮತ್ತೊಬ್ಬ ಶಾಸಕನ ಖಾಸಗಿ ಅಂಗರಕ್ಷಕ ಗುಂಡಿನ ದಾಳಿ ನಡೆಸುತ್ತಾನೆ ಎಂದರೆ. ಇಲ್ಲಿನ ವ್ಯವಸ್ಥೆಗೆ ಎಲ್ಲಿಗೆ ತಲುಪಿರಬಹುದು’ ಎಂದು ಪ್ರಶ್ನಿಸಿದರು.

‘ಘಟನೆ ಖಂಡಿಸಿ ನಗರದಲ್ಲಿ ದೊಡ್ಡ ರ್ಯಾಲಿ, ಪ್ರತಿಭಟನೆ ಮಾಡುತ್ತೇವೆ. ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಬೇಕು. ಹೋರಾಟಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ರಾಜ್ಯದ ನಾಯಕರೂ ಬರಲಿದ್ದಾರೆ’ ಎಂದರು.

‘ಅಸತ್ಯವನ್ನು ಬಿಂಬಿಸುವ ಕಾಂಗ್ರೆಸ್ನ ಸತ್ಯ ಶೋಧನಾ ಸಮಿತಿ ಬಂದು ಹೋಗಿದೆ. ಅವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ’ ಎಂದ ಜನಾರ್ದನ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.

ಹಲ್ಲೆಗೆ ಪ್ರತಿಯಾಗಿ ಖಾರದ ಪುಡಿ

ಕಾಂಗ್ರೆಸ್ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಖಾರದ ಪುಡಿ ಎರಚಿದ್ದರು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ದೊಂಬಿಗೆ ಸಂಬಂಧಿಸಿದ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದರು.

‘ಬಿಜೆಪಿ ಕಾರ್ಯಕರ್ತೆ ಜ್ಯೋತಿ ಎಂಬುವವರ ಮೇಲೆ ಥಿಯಟರ್ ಶಿವು ಎಂಬಾತ ಹಲ್ಲೆ ಮಾಡಿದ್ದ. ತಮ್ಮ ರಕ್ಷಣೆಗೆ ಜ್ಯೋತಿ ಖಾರದ ಪುಡಿ ಎರಚಿದ್ದರು’ ಎಂದರು.

ಸತೀಶ್ ರೆಡ್ಡಿಗೆ ಏನೂ ಆಗಿಲ್ಲ

‘ಭರತ್ ರೆಡ್ಡಿ ಸಂಬಂಧಿ ಸತೀಶ ರೆಡ್ಡಿಗೆ ಏನು ಆಗಿಲ್ಲ. ಆರಾಮವಾಗಿ ಆಸ್ಪತ್ರೆಯಿಂದ ನಡೆದುಕೊಂಡು ಆಂಬುಲೆನ್ಸ್ ಹತ್ತಿ ಹೋಗುತ್ತಾನೆ. ತೆಲೆಗೆ ಸುಮ್ಮನೆ ಬ್ಯಾಂಡೇಜ್ ಹಾಕಿದ್ದಾರೆ. ಮೂಗಲ್ಲಿ ಸುಮ್ಮನೆ ಹತ್ತಿ ಇಟ್ಟಿದ್ದಾರೆ. ಹೊರಡುವಾಗ ಸತೀಶ್ ರೆಡ್ಡಿ ಗೆಲುವಿನ ಚಿಹ್ನೆ ಪ್ರದರ್ಶಿಸುತ್ತಾನೆ. ಬಂಧನಕ್ಕೀಡಾಗುವ ಭಯದಿಂದ ಅವನನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಇದು ಎಎಸ್ಪಿ ರವಿಕುಮಾರ್ ಶಾಸಕ ಭರತ್ ರೆಡ್ಡಿ ಸಂಬಂಧಿ ಪ್ರತಾಪ್ ರೆಡ್ಡಿ ಮಾಡಿರುವ ಕುತಂತ್ರ’ ಎಂದು ಆರೋಪಿಸಿದರು. ‘ಮೊದಲ ಬಾರಿ ಘರ್ಷಣೆ ನಡೆದಾಗ ರಾತ್ರಿ ಮನೆಗೆ ಬಂದಿದ್ದ ಎಸ್ಪಿ ಮತ್ತು ಡಿಐಜಿ ಕಾಂಗ್ರೆಸ್ನವರಿಂದಲೇ ತಪ್ಪಾಗಿದೆ ಎಂದಿದ್ದರು. ಅವರ ಮಾತು ಕೇಳಿ ನಾನು ಮನೆಯಲ್ಲೇ ಉಳಿದಿದ್ದೆ. ಆದರೆ ಪೊಲೀಸರ ಭದ್ರತಾ ವೈಫಲ್ಯದಿಂದ ಭರತ್ ರೆಡ್ಡಿ ನಮ್ಮ ಮನೆ ವರೆಗೆ ಬಂದು ದಾಳಿ ಮಾಡಿದರು. ಭರತ್ ರೆಡ್ಡಿಯನ್ನು ನಮ್ಮ ಮನೆ ವರೆಗೆ ಬರಲು ಬಿಡಬಾರದಿತ್ತು’ ಎಂದು ಅವರು ಹೇಳಿದರು.