ತಾಲ್ಲೂಕಿನ ಮೆಟ್ರಿ-ದೇವಸಮುದ್ರ ಗ್ರಾಮದ ಮಧ್ಯೆ ಇರುವ ಶ್ರೀಕಲ್ಯಾಣಚೌಕಿ ಮಠದ ‘ಕಾಮಧೇನು ಗೋಶಾಲಾ ಸೇವೆ ಟ್ರಸ್ಟ್’ನ ಗೋಶಾಲೆಯ ಜಾನುವಾರುಗಳಿಗೆ ಅಗತ್ಯವಿರುವ ಮೇವು, ಸೊಪ್ಪೆ ಸಂಗ್ರಹಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈಚೆಗೆ ಬೃಹತ್ ಶೆಡ್ ನಿರ್ಮಿಸಲಾಗಿದೆ. ವರ್ಷಪೂರ್ತಿ ಜಾನುವಾರುಗಳಿಗೆ ಆಹಾರ ಅಗತ್ಯವಿರುವುದರಿಂದ ಮಳೆ, ಗಾಳಿಗೆ ಹಾಳಾಗದಂತೆ ಜೋಪಾನ ಮಾಡಲಾಗಿದೆ.
– ಕಾಮಧೇನು ಗೋಶಾಲಾ ಸೇವೆ ಟ್ರಸ್ಟ್‍ನ ಕೆ.ಎಂ. ಬಸವರಾಜಶಾಸ್ತ್ರಿ.
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್ ಬಳಿಯ ಕಾಮಧೇನು ಗೋಶಾಲಾ ಸೇವೆ ಟ್ರಸ್ಟ್‍ನವರು ಶೆಡ್‍ನಲ್ಲಿ ಮೇವು ಸಂಗ್ರಹಿಸಿರುವ ದೃಶ್ಯ
‘ಈ ಬಾರಿ ಬೇಸಿಗೆ ಭತ್ತದ ಬೆಳೆ ಇಲ್ಲದ ಕಾರಣ ಮುಂಬರುವ ದಿನಗಳಲ್ಲಿ ನಮ್ಮ ಫಾರಂನಲ್ಲಿ 40ಆಕಳುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ₹ 4.ಲಕ್ಷ ಭರಿಸಿ 120ಎಕರೆ ಮೇವು ಖರೀದಿಸಿದ್ದೇನೆ