ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನೆಲ್ಲೂಡಿ: ನೀರಿಗಾಗಿ ಹಾಹಾಕಾರ 

Published 17 ಮಾರ್ಚ್ 2024, 12:43 IST
Last Updated 17 ಮಾರ್ಚ್ 2024, 12:43 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಹೊಸ ನೆಲ್ಲೂಡಿ ಗ್ರಾಮದ ಎಸ್.ಸಿ ಕಾಲೊನಿಯಲ್ಲಿ ಕೆಲ ದಿನಗಳಿಂದ ನೀರು ಪೂರೈಕೆಯಲ್ಲಿ ಅಡಚಣೆಯಾಗಿ ಜನರ ಜೊತೆಗೆ ಜಾನುವಾರುಗಳಿಗೂ ನೀರಿನ ತೊಂದರೆ ಶುರುವಾಗಿದೆ.

ಗ್ರಾಮದಲ್ಲಿರುವ ಮೂರು ಬೋರ್ ವೆಲ್‍ಗಳಿಂದ ಮೇಲ್ಭಾಗದಲ್ಲಿ ಅಳವಡಿಸಿರುವ ಕಿರು ನೀರು ಪೂರೈಕೆ ಟ್ಯಾಂಕ್‍ಗೆ ಸುಮಾರು 1ರಿಂದ 1.50ಕಿ.ಮೀ ದೂರದಿಂದ ನೀರು ಪೂರೈಕೆಯಾಗಬೇಕಿದೆ. ಜೊತೆಗೆ ಕೊಳವೆಬಾವಿಯಲ್ಲಿ ಅಂತರ್ಜಲಮಟ್ಟ ಇತ್ತೀಚೆಗೆ ಕುಸಿದಿರುವುದರಿಂದ ಅಗತ್ಯವಿರುವಷ್ಟು ನೀರು ಜನರಿಗೆ ದೊರೆಯುತ್ತಿಲ್ಲ.

ಕಾಲೊನಿಯಲ್ಲಿ 150 ಮನೆಗಳಿದ್ದು ನೀರಿಗಾಗಿ ರಡ್ಡೇರ ಓಣಿ, ಗೌಡರ ಓಣಿ ಸೇರಿ ಇತರೆಡೆ ತೆರಳಿ ನೀರು ಹೊತ್ತು ತರಬೇಕಿದೆ. ಕೂಡಲೇ ನೆಲ್ಲೂಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೊಸ ಕೊಳವೆಬಾವಿ ಕೊರೆಯಿಸಿ ಅದಕ್ಕಾಗಿ ಪ್ರತ್ಯೇಕ ನೀರಿನ ಟ್ಯಾಂಕ್ ನಿರ್ಮಿಸುವಂತೆ ಎಸ್.ಸಿ ಕಾಲೊನಿ ನಿವಾಸಿಗಳಾದ ಮಲ್ಲಪ್ಪ, ಹುಲುಗಪ್ಪ, ಅಂಬಮ್ಮ, ಸಣ್ಣ ಹುಲಿಯಮ್ಮ, ಹುಲಿಗೆಮ್ಮ, ಜಡಿಯಮ್ಮ, ಈರಮ್ಮ, ಬುಜ್ಜಿ, ಪಾರ್ವತಿ, ಭೂಮಿಕಾ, ಪ್ರೇಮ ಒತ್ತಾಯಿಸಿದ್ದಾರೆ.

‘ಕಾಲೊನಿಯಲ್ಲಿ ಹೊಸ ಕೊಳವೆಬಾವಿ ಕೊರೆಯಿಸುವಂತೆ ಪಿಡಿಒ ಅವರಲ್ಲಿ ಮನವಿ ಮಾಡಿರುವುದಾಗಿ’ ಹೊಸ ನೆಲ್ಲೂಡಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಉಮೇಶ್ ತಿಳಿಸಿದರು.

‘ಕಾಲೊನಿ ವ್ಯಾಪ್ತಿಯಲ್ಲಿರುವ ಮೂರು ಕೊಳವೆಬಾವಿಗಳಿಂದ ಟ್ಯಾಂಕ್‍ಗೆ ನೀರು ಪೂರೈಸಲಾಗುತ್ತಿದೆ. ಸದ್ಯ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನ ಕೊರತೆ ಉಂಟಾಗಿದೆ. ಮುಂದೆ ಇದೇ ರೀತಿ ಅಡಚಣೆ ಮುಂದುವರಿದಲ್ಲಿ ಹೊಸ ಕೊಳವೆಬಾವಿ ಹಾಕಿಸಲಾಗುವುದು’ ಎಂದು ಪಿಡಿಒ ಹಾಲರವಿ ಶೇಷಗಿರಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT