ಕುರುಗೋಡು: ‘ಕುರುಗೋಡು ಉತ್ಸವ ಮುಂದಿನ ದಿನಗಳಲ್ಲಿ ಹಂಪಿ, ಕಿತ್ತೂರು, ಮೈಸೂರು ಉತ್ಸವಗಳಂತೆ ಮಾದರಿಯಾಗಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಕುರುಗೋಡು ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಚೀನ ಇತಿಹಾಸ ಹೊಂದಿರುವ ಕುರುಗೋಡು ಮುಂದಿನ ದಿನಗಳಲ್ಲಿ ಉತ್ಸವದ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿಗೆ ವೇದಿಕೆಯಾಗಲಿದೆ. ಶಾಸಕ ಜೆ.ಎನ್. ಗಣೇಶ್ ಅವರ ಕಾಳಜಿಯಿಂದ ಅಭಿವೃದ್ಧಿ ಕೆಲಸ ಮಾಡುವ ಜತೆಗೆ ಉತ್ಸವ ಜರುಗುತ್ತಿದ್ದು, ಗತವೈಭಮ ಮರುಕಳಿಸಲಿದೆ’ ಎಂದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ‘ಅಭಿವೃದ್ಧಿ ವಿಷಯದಲ್ಲಿ ನಾನು ರಾಕೀಯ ಮಾಡುವುದಿಲ್ಲ. ಅದೇನಿದ್ದರು ಚುನಾವಣೆಯಲ್ಲಿ ಮಾತ್ರ. ಪಕ್ಷಾತೀತವಾಗಿ ಎಲ್ಲರೂ ಅಭಿವೃದ್ಧಿಗೆ ಕೈಜೋಡಿಸಬೇಕು ಎನ್ನುವುದು ನನ್ನ ಬಯಕೆ’ ಎಂದರು.

‘ರೈತರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ವಿಷಯದಲ್ಲಿ ರಾಜಿಯಾಗುವುದಿಲ್ಲ. ಅವರಿಗಾಗಿ ಹಗಲು ರಾತ್ರಿ ಶ್ರಮಿಸಲು ಸಿದ್ಧ’ ಎಂದರು.

‘ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಜತೆಗೆ ಕುರುಗೋಡು ಪಟ್ಟಣದ ಇತಿಹಾಸ ಪರಿಚಯಿಸುವ ಕೆಲಸ ಉತ್ಸವ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮಾದರಿ ಉತ್ಸವ ಮಾಡುವ ಬಯಕೆ ಇದೆ’ ಎಂದರು.

ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗಾಂಧಿತತ್ವಾಧಾರಿತ ಬಾಲಕಿಯರ ವಸತಿ ಶಾಲೆ ಕಟ್ಟದ ನಿರ್ಮಾಣವಾಗುತ್ತಿದೆ. ಕಂಪ್ಲಿ ಮತ್ತು ಕುರುಗೋಡು ಎರಡು ತಾಲ್ಲೂಕು ಕೇಂದ್ರಗಳಲ್ಲಿ 100 ಹಾಸಿಗೆ ಆಸ್ಪತ್ರೆ, ಮಿನಿ ವಿಧಾನಸೌಧ ಮತ್ತು ತಾಲ್ಲೂಕು ಪಂಚಾಯಿತಿ ಕಟ್ಟಡಗಳು ನಿರ್ಮಾಣವಾಗುತ್ತಿದೆ ಎಂದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಎಚ್.ಡಿ. ರಾಜೇಶ್, ತಹಶೀಲ್ದಾರ್ ನರಸಪ್ಪ, ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.