ಮರಿಯಮ್ಮನಹಳ್ಳಿ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ತಿಂಗಳಿಂದ ಅಗತ್ಯ ಚುಚ್ಚುಮದ್ದು ಹಾಗೂ ಔಷಧಗಳಿಲ್ಲ. ಇದು ಜನರಿಗೆ ಸಾಕಷ್ಟು ತೊಂದರೆ ನೀಡುತ್ತಿದೆ.

ಇದಕ್ಕೆ ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳ ತಿಕ್ಕಾಟ ಕಾರಣ ಎನ್ನಲಾಗಿದ್ದು, ಅಗತ್ಯ ಔಷಧ ಹಾಗೂ ಚುಚ್ಚುಮದ್ದುಗಳನ್ನು ಹೊರಗಡೆಯಿಂದ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಡಿ.10ರಂದೇ ಕೇಂದ್ರದ ಫಾರ್ಮಸಿ ಅವರು ಐರನ್ ಸುಕ್ರೋಸ್, ಆಕ್ಸಿಟಾಸಿನ್, ಟಿಟಿ, ಡೆಕ್ಸೊನಾ, ಸಿಪಿಎಂ, ಡೈಕ್ಲೊ ಚುಚ್ಚುಮದ್ದುಗಳು ಹಾಗೂ ಐವಿಎಫ್ ಎನ್ಎಸ್ (100ಎಂಎಲ್), ಎನ್ಎಸ್(500ಎಂಎಲ್) ಸೇರಿದಂತೆ ಒಟ್ಟು 14ತರಹದ ಅಗತ್ಯ ಔಷಧಗಳನ್ನು ಸರಬರಾಜು ಮಾಡುವಂತೆ ಕೋರಿ ಆಗಿನ ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳಾ ಅವರಿಗೆ ಪತ್ರವನ್ನು ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೆ ಅಗತ್ಯ ಔಷಧಗಳು ಸರಬರಾಜು ಆಗದಿರುವುದೇ ರೋಗಿಗಳು ಪರದಾಡುವಂತಾಗಿದೆ.

ಇನ್ನು ಡಿ.18ರಂದು ಡಾ.ಮಂಜುಳಾ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕೇಂದ್ರದ ಕರ್ತವ್ಯನಿರತ ಶುಶ್ರೂಷಕಿ ಕೆ.ಸುನೀತ ಅವರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಲ್ಲದೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು, ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ವೈದ್ಯಾಧಿಕಾರಿ ಡಾ.ಮಂಜುಳಾ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದರು.

ಸಾರ್ವಜನಿಕರಿಂದ ಪದೇ ಪದೇ ದೂರು ಬರುತ್ತಿರುವುದರಿಂದ ಮುಂದಿನ ಆದೇಶದವರೆಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಮಂಜುಳಾ ಅವರನ್ನು ತಾತ್ಕಾಲಿಕವಾಗಿ ಮಗಿಮಾವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾರ್ಯ ಹಂಚಿಕೆ ಮಾಡಿ, ಆ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಷ ಗಜವಲ್ಲಿ ಅವರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪೂರ್ಣ ಆಡಳಿತ ವಹಿಸಲು ಸಂಬಂಧಪಟ್ಟವರಿಗೆ ಸೂಚಿಸಿ ಡಿ.19 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆದೇಶಿಸಿದ್ದರು.

ಆದರೆ, ಡಾ.ಅನುಷ ಗಜವಲ್ಲಿ ಅವರಿಗೆ ಆಡಳಿತ ವಹಿಸದ ಕಾರಣ ಒಂದು ದಿನ ಬಂದು ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದೆ. ಡಿ.31ರಂದು ಡಾ.ಅನುಷ ಗಜವಲ್ಲಿ ಅವರಿಂದ ಆಡಳಿತ ವಹಿಸಿಕೊಳ್ಳುವಂತೆ ಚಿತ್ತವಾಡಿಗಿಯ ವೈದ್ಯಾಧಿಕಾರಿ ಡಾ.ಸಿ.ಬಸವರಾಜ ಅವರಿಗೆ ಆದೇಶಿಸಿದ್ದರೂ, ಅವರೂ ಇನ್ನೂ ಕೇಂದ್ರದ ಆಡಳಿತ ವಹಿಸಿಕೊಂಡಿಲ್ಲ ಎನ್ನಲಾಗಿದೆ. ಇದರಿಂದಾಗಿ ಕೇಂದ್ರದಲ್ಲಿ ಅಗತ್ಯ ಔಷಧಗಳ ಕೊರತೆ, ಕಾಯಂ ಹಾಗೂ ಹೊರಗುತ್ತಿಗೆ ಸಿಬ್ಬಂದಿಯ 2ರಿಂದ 4ತಿಂಗಳ ವೇತನವು ಪಾವತಿಯಾಗಿಲ್ಲ ಎನ್ನಲಾಗಿದೆ.

ಇರುವುದಕ್ಕಿಂತ ಇಲ್ಲಗಳ ಆಗರವೇ ಹೆಚ್ಚಿರುವ ಕೇಂದ್ರ ಹೆಸರಿಗಷ್ಟೇ ‘ಸಮುದಾಯ ಆರೋಗ್ಯ ಕೇಂದ್ರ’ದ ಕಟ್ಟಡ, ಇರುವುದು ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯಗಳು, ಸಿಬ್ಬಂದಿ ಮಾತ್ರ. ಎಕ್ಸರೆ ಸೇರಿದಂತೆ ಲಕ್ಷಾಂತರ ರೂಪಾಯಿ ಮೊತ್ತದ ಉಪಕರಣಗಳು ಬಳಕೆಯಾಗದೇ ದೂಳು ಹಿಡಿಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸದಿರುವುದಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

‘ಚಿತ್ತವಾಡಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಬಸವರಾಜ ಅವರಿಗೆ ಸ್ಥಳೀಯ ಕೇಂದ್ರದ ಆಡಳಿತದ ಪ್ರಭಾರವಹಿಸಿಕೊಳ್ಳುವಂತೆ ಈಗಾಗಲೇ ಅಧಿಕಾರಿಗಳು ಸೂಚಿಸಿದ್ದು ಅವರು ಒಂದೆರಡು ದಿನದಲ್ಲಿ ವಹಿಸಿಕೊಳ್ಳಲಿದ್ದಾರೆ’
ಡಾ.ವಿನೋದ್ ತಾಲ್ಲೂಕು ವೈದ್ಯಾಧಿಕಾರಿ (ಪ್ರಭಾರ) ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.