ಮರಿಯಮ್ಮನಹಳ್ಳಿ: ಭೂಮಿಯ ಮೇಲಿನ ಪ್ರತಿಯೊಂದು ಜೀವಿಯಲ್ಲಿ ಪರಮಾತ್ನನ್ನು ಕಾಣುವ ಹಾಗೂ ಜಗತ್ತಿಗೆ ಸಾರಿದ ಧರ್ಮ ಎಂದರೆ ಅದು ಹಿಂದೂ ಧರ್ಮ ಮಾತ್ರ ಎಂದು ಜಿ.ನಾಗಲಾಪುರದ ಒಪ್ಪತ್ತೇಶ್ವರ ಮಠದ ನಿರಂಜನಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆರ್ಶೀವಚನ ನೀಡಿದರು.

ಅನ್ಯ ಧರ್ಮವನ್ನು ಪ್ರೀತಿ, ಗೌರವದಿಂದ ಕಾಣುವುದರ ಜೊತೆಗೆ ಜಗತ್ತಿನಲ್ಲಿರುವ 750ಕೋಟಿ ಜನರದಲ್ಲಿಯೂ ದೇವರನ್ನು ಕಾಣುವ ಧರ್ಮ ನಮ್ಮದ್ದಾಗಿದೆ. ಆದರೆ ಬೇರೆ ಧರ್ಮದವರಿಗೆ ಒಂದೊಂದು ಧರ್ಮಗ್ರಂಥ ಇದ್ದರೆ, ನಮ್ಮದು ಕೇವಲ ಧರ್ಮವಲ್ಲ, ನಮ್ಮದು ವಿಜ್ಞಾನವಾಗಿದೆ. ಹೆಜ್ಜೆ ಹೆಜ್ಜೆಗೂ ನಮ್ಮ ಹಿಂದೂ ಧರ್ಮವನ್ನು ಸಾರುವ ಸಾವಿರಾರು ಗ್ರಂಥಗಳಿಗೆ ಎಂದರು.

ಪಟ್ಟಣದ ಅರಳೀಹಳ್ಳಿ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆರ್ಶೀವಚನ ನೀಡಿದರು. ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಳಗೇರಿ ಉಪನ್ಯಾಸ ನೀಡಿದರು. ಹಿಂದೂ ಸಮಾವೇಶದ ಅಧ್ಯಕ್ಷ ಹಾಗೂ ವೈದ್ಯ ಡಾ.ಜಿ.ಎಂ.ಸೋಮೇಶ್ವರ ಅಧ್ಯಕ್ಷತೆವಹಿಸಿದ್ದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಹಿರಿಯ ವೈದ್ಯ ಡಾ.ಬಿ.ಅಂಬಣ್ಣ ಹಾಗೂ ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.