ಕಂಪ್ಲಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ದೇವಲಾಪುರ ಗ್ರಾಮದ ಕಣಿವೆ ಮಾರೆಮ್ಮ ದೇವಾಲಯದ ಬಳಿ, ರಾಜ್ಯ ಹೆದ್ದಾರಿ-29ರಲ್ಲಿ ತಾಳೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಶುಕ್ರವಾರ ನಸುಕಿನಲ್ಲಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿತ್ತು.

ಟ್ಯಾಂಕರ್ನಲ್ಲಿನ ಎಣ್ಣೆ ಸೋರಿಕೆ ಆಗುತ್ತಿರುವ ವಿಷಯ ತಿಳಿದು, ಸುತ್ತಮುತ್ತಲ ಗ್ರಾಮಸ್ಥರು ಪ್ಲಾಸ್ಟಿಕ್ ಬಕೆಟ್, ನೀರಿನ ಕ್ಯಾನ್, ಬಿಂದಿಗೆ ಮುಂತಾದವು ತಂದು, ಸಂಗ್ರಹಿಸಲು ಮುಗಿಬಿದ್ದರು.

‘ಬೆಂಗಳೂರಿನಿಂದ ಗಂಗಾವತಿಗೆ ಹೊರಟಿದ್ದ ಟ್ಯಾಂಕರ್ನ ಚಾಲಕ ಮತ್ತು ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ಯಾಂಕರ್ನಲ್ಲಿ 20 ಸಾವಿರ ಲೀಟರ್ ತಾಳೆ ಎಣ್ಣೆ ಇತ್ತು ಎಂದು ಅಂದಾಜಿಸಲಾಗಿದೆ’ ಎಂದು ಕಡತಿನಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.