ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುಗೋಡು: ಮೊಬೈಲ್‍ ರೀಚಾರ್ಜ್ ದರ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ

Published 2 ಜುಲೈ 2024, 16:22 IST
Last Updated 2 ಜುಲೈ 2024, 16:22 IST
ಅಕ್ಷರ ಗಾತ್ರ

ಕುರುಗೋಡು: ಕೇಂದ್ರ ಸರ್ಕಾರದ ಟ್ರಾಯ್ ಸಂಸ್ಥೆ ಖಾಸಗಿ ಮೊಬೈಲ್ ನೆಟ್ ವರ್ಕ್ ಕಂಪನಿಗಳಿಗೆ ಮಣೆಹಾಕಿ ಧರ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಎಐಡಿಎಸ್‍ಒ ಯುವಜನ ಸಂಘಟನೆಸದಸ್ಯರು ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಮಂಗಳವಾರ ಧರಪರಿಷ್ಕರಣೆಯ ಪ್ರತಿಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೋಳೂರು ಪಂಪಾಪತಿ ಮಾತನಾಡಿ, ಕೇಂದ್ರ ಸರ್ಕಾರದ ಈ ನಡೆಯಿಂದ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಭೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಖಾಸಗಿ ಕಂಪನಿಗಳ ಮಾಲೀಕರಿಂದ ಹಣ ಪಡೆದು ಈಗ ಅವರ ರುಣ ತೀರಿಸುವ ಉದ್ದೇಶ ದಿಂದ ಧರ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರ, ಅಗತ್ಯವಸ್ತುಗಳ ಬೆಲೆ ಏರಿಕೆ ಸಮಸ್ಯೆಯಲ್ಲಿರುವ ಜನರಿಗೆ ಧರ ಏರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ರೀಚಾರ್ಜ್ ಧರ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಜಗದೀಶ್ ನೇಮಕಲ್, ಬಸವನ ಗೌಡ, ಪಂಪನ ಗೌಡ, ಬಸವರಾಜ ಸ್ವಾಮಿ, ಮಹೇಶ್, ಶಿವಯ್ಯ, ಅನೀಲ್ ಗೌಡ ಮತ್ತು ಶ್ರೀನಿವಾಸ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT