ಬಳ್ಳಾರಿ: ರಾಹುಲ್ ಗಾಂಧಿ ಅಪ್ರಬುದ್ಧ ನಾಯಕರಾಗಿದ್ದು, ಪದೇ ಪದೇ ಅಪ್ರಬುದ್ಧತೆಯನ್ನು ಪ್ರಕಟಿಸುತ್ತಿದ್ದಾರೆ. ಮತದಾರರ ಪಟ್ಟಿ ವಿಚಾರದಲ್ಲಿ ರಾಹುಲ್ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ದೇಶದಲ್ಲಿ ಕಾಂಗ್ರೆಸ್ ಭ್ರಮನಿರಸನಗೊಂಡಿದೆ. ಹತಾಶೆಯಿಂದ ಈ ರೀತಿ ಮೇಲಿಂದ ಮೇಲೆ ಸುಳ್ಳು ಆರೋಪಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣೆ ಪೂರ್ವದಲ್ಲಿ ಮತದಾರರ ಪಟ್ಟಿಯನ್ನು ನೀಡಲಾಗುತ್ತದೆ. ಆ ಸಂದರ್ಭದಲ್ಲಿ ಮತ ಪಟ್ಟಿಯ ಲೋಪವನ್ನು ಪ್ರಶ್ನಿಸಬಹುದಾಗಿತ್ತು. ಏಕೆ ಪ್ರಶ್ನೆ ಮಾಡಲಿಲ್ಲ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಒಬ್ಬ ವ್ಯಕ್ತಿ ಎರಡು ಬಾರಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮತದಾನ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಬೂತ್ ಏಜೆಂಟ್ ಏಕೆ ಪ್ರಶ್ನಿಸಿಲ್ಲ. ಚುನಾವಣೆ ಪೂರ್ವದಲ್ಲಿ ಮತದಾರರ ಪಟ್ಟಿಯಲ್ಲಿ ಲೋಪವಿದೆ ಎಂದು ಚುನಾವಣೆ ಆಯೋಗಕ್ಕೆ ದೂರು ನೀಡಬಹುದಿತ್ತು. ಆದರೆ ಏಕೆ ದೂರು ನೀಡಲಿಲ್ಲ?’ ಎಂದು ಅವರು ಕೇಳಿದ್ದಾರೆ.

‘2024ರ ಲೋಕಸಭಾ ಚುನಾವಣೆ ಆದ ನಂತರ ಪ್ರಶ್ನಿಸಬೇಕಾಗಿತ್ತು. ಆದರೆ, ಲೋಕಸಭಾ ಚುನಾವಣೆ ನಡೆದು ಒಂದೂವರೆ ವರ್ಷದ ನಂತರ ಜ್ಞಾನೋದಯವಾಗಿದೆ. ಈ ರೀತಿ ಚುನಾವಣಾ ಆಯೋಗದ ಮೇಲೆ ಸುಳ್ಳು ಸುದ್ದಿಯನ್ನು ಹರಡಿಸಿ ಸಂವಿಧಾನ ಬದ್ಧವಾದ ಸಂಸ್ಥೆಗಳ ಮೇಲೆ ಅಪಮಾನ, ಅಗೌರವ ಹಾಗೂ ಅಪನಂಬಿಕೆ ಮೂಡಿಸಿ ಸಂವಿಧಾನದ ಕಗ್ಗೋಲೆ ಮಾಡುವುದಕ್ಕೆ ರಾಹುಲ್ ಗಾಂಧಿ ಅವರು ಹೊರಟಿದ್ದಾರೆ’ ಎಂದು ಅನಿಲ್ ಆರೋಪಿಸಿದ್ದಾರೆ.

‘ರಾಹುಲ್ ಗಾಂಧಿ ನೇತೃತ್ವದಲ್ಲಿ ಇದುವರೆಗೂ 94 ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ. ಗೆದ್ದರೆ ಪ್ರಜಾಪ್ರಭುತ್ವದ ಜಯ, ಸೋತರೆ ಚುನಾವಣಾ ಆಯೋಗದ ಮೇಲೆ ಆರೋಪ. ಇದು ಕಾಂಗ್ರೆಸ್ಸಿನ ನಿತ್ಯ ಕಾಯಕ. ಬೀದರ್, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಕಲಬುರ್ಗಿ, ರಾಯಚೂರು ಕ್ಷೇತ್ರದಲ್ಲಿ ಏನೂ ಆಗಿಲ್ಲವೇ? ಕಾಂಗ್ರೆಸ್ ಲೀಡ್ ಬಂದಿರುವ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಯಾಕೆ ಮಾತನಾಡಲಿಲ್ಲ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಬಳ್ಳಾರಿ ಚುನಾವಣೆಯಲ್ಲಿ ಅಕ್ರಮ ನಡೆಸಿದ ಕಾಂಗ್ರೆಸ್ ಪಕ್ಷ, ವಾಲ್ಮೀಕಿ ನಿಗಮದ 20 ಕೋಟಿ ಹಣವನ್ನು ಬಳಸಿಕೊಂಡು ಚುನಾವಣೆ ಗೆದ್ದಿದೆ. ಸರ್ವಜ್ಞನಗರದಲ್ಲಿ 37,000 ಕಾಂಗ್ರೆಸ್ ಲೀಡಿನಲ್ಲಿದ್ದು, ನಂತರ 77,000 ಲೀಡ್ ಬಂದಿದೆ. ಇದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು?’ ಎಂದು ಅವರು ವಾದಿಸಿದ್ದಾರೆ.

‘2024ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು, ಸರ್ಕಾರದ ಅಧಿಕಾರಿಗಳು ಅವರ ಕೈಯಲ್ಲಿದ್ದರು. ಒಂದೆಡೆ ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುವುದು, ಮತ್ತೊಂದೆಡೆ ಕರ್ನಾಟಕದ ಬಗ್ಗೆ ಮಾತನಾಡುವುದು – ಇದು ರಾಹುಲ್ ಗಾಂಧಿ ಅವರ ಭಿನ್ನ ನಿಲುವು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.