ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಕನ್ನಡ ‍ಪ್ರೇಮ: ಶಾಲಾ ದಾಖಲಾತಿಯಲ್ಲಿ 2ನೇ ಸ್ಥಾನ

'ರಾಮನಗರ ಸರ್ಕಾರಿ ಶಾಲೆ'ಯಲ್ಲಿ ಮುಸ್ಲಿಂರೇ ವಿದ್ಯಾರ್ಥಿಗಳು
Published 1 ಜುಲೈ 2024, 7:49 IST
Last Updated 1 ಜುಲೈ 2024, 7:49 IST
ಅಕ್ಷರ ಗಾತ್ರ

ಅರಸೀಕೆರೆ (ವಿಜಯನಗರ ಜಿಲ್ಲೆ): ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಆತಂಕದ ನಡುವೆಯೂ ರಾಮನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಎರಡನೇ ಅತೀ ಹೆಚ್ಚು ದಾಖಲಾತಿ ಹೊಂದಿರುವ ಕೀರ್ತಿಗೆ ಭಾಜನವಾಗಿದೆ.

ಗುಣಮಟ್ಟದ ಶಿಕ್ಷಣ, ಕಟ್ಟಡ, ಉತ್ತಮ ವಾತಾರಣದ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನಡೆಸಿದೆ. ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಖಾಸಗಿ ಶಾಲೆ ಮಕ್ಕಳಂತೆ ಸಮವಸ್ತ್ರ, ಶಿಸ್ತು, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ.

ಶಾಲೆಗೆ ಹೈಟೆಕ್ ಶೌಚಾಲಯ, ಪ್ರಯೋಗಾಲಯ, ಕೈ ತೋಟ, ಗಣಕಯಂತ್ರ ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿ ಪೋಷಕರ ಗಮನ ಸೆಳೆಯುವುದರ ಮೂಲಕ ದಾಖಲಾತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಶಾಲೆಯಲ್ಲಿ ದೇಣಿಗೆ ರೂಪದಲ್ಲಿ 500 ಲೀ. ಸಾಮರ್ಥ್ಯದ ಟ್ಯಾಂಕರ್, 100 ಲೀ. ಸಾಮರ್ಥ್ಯದ ಶುದ್ಧ ಕುಡಿಯುವ ನೀರು ಘಟಕ ಹೊಂದಿದೆ. ಶಾಲಾ ಕಾಂಪೌಂಡ್, ಕಲಿಕೆಗೆ ಆದ್ಯತೆ ನೀಡುವ ವಾತಾವರಣ ಇದೆ.

ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿ ಇರುವ ಶಾಲೆಯಲ್ಲಿ 7 ಜನ ಶಿಕ್ಷಕರಿದ್ದು, ಒಟ್ಟು 137 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಹರಪನಹಳ್ಳಿ ತಾಲೂಕಿನಲ್ಲಿ ಎರಡನೇ ಅತೀ ಹೆಚ್ಚು ದಾಖಲಾತಿ ಹೊಂದಿದ ಶಾಲೆ ಆಗಿದೆ. ಮೊದಲೇ ಸ್ಥಾನ ಚಿಗಟೇರಿ ಹೋಬಳಿಯ ಚಿಗಟೇರಿ ಮ್ಯಾಸರಹಟ್ಟಿ ಪ್ರಥಮ ಸ್ಥಾನ ಹೊಂದಿದೆ.

ದಾಖಲಾತಿ ವಿವರ: ತರಗತಿ ಒಟ್ಟು ವಿದ್ಯಾರ್ಥಿ ಸಂಖ್ಯೆ
1 ನೇ ತರಗತಿ 28
2 ನೇ ತರಗತಿ 23
3 ನೇ ತರಗತಿ 32
4 ನೇ ತರಗತಿ 32
5 ನೇ ತರಗತಿ 22

ಒಟ್ಟು. 137

'ರಾಮ' ಆರಾಧಕರಿಲ್ಲದ ಗ್ರಾಮದಲ್ಲಿ ಕನ್ನಡ ಶಾಲಾ ಪ್ರೇಮ ಅರಸೀಕೆರೆ: ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು ದಾಖಲಾತಿ ಹೊಂದಿದ

ಅರಸೀಕೆರೆ ಹೋಬಳಿಯ ರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೋಟ
ಅರಸೀಕೆರೆ ಹೋಬಳಿಯ ರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೋಟ
ಗ್ರಾಮಸ್ಥರ ಸಹಭಾಗಿತ್ವದಲ್ಲಿ ಶಿಕ್ಷಕರ ಗುಣಮಟ್ಟದ ಶಿಕ್ಷಣ ದಾಖಲಾತಿ ಏರಿಕೆಗೆ ಸಹಕಾರಿಯಾಗಿದೆ. ಗ್ರಾಮಸ್ಥರ ಕನ್ನಡ ಪ್ರೇಮ ಗಮನಾರ್ಹ
ಯು.ಬಸವರಾಜಪ್ಪ ಕ್ಷೇತ್ರ ಶಿಕ್ಷಣಧಿಕಾರಿ
ಕಿರಿಯ ಪ್ರಾಥಮಿಕ ಶಾಲಾ ದಾಖಲಾತಿಯಲ್ಲಿ ರಾಮನಗರ ಶಾಲೆ ಎರಡನೇ ಸ್ಥಾನದಲ್ಲಿದೆ. ಡಯಟ್ ಸರ್ವೇ ತಂಡ ಪ್ರಥಮ ಸ್ಥಾನ ನೀಡಿದ್ದು ಶಾಲೆಯ ಮತ್ತೊಂದು ಗರಿ
ಎಂ.ಎಂ ಚಂದ್ರಪ್ಪ ಮುಖ್ಯಶಿಕ್ಷಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಮನಗರ

Quote -

ಮುಸ್ಲಿಂ ಸಮುದಾಯದ ಕನ್ನಡ ಪ್ರೇಮ
ಅರಸೀಕೆರೆ ಹೋಬಳಿಯ ರಾಮನಗರ ಗ್ರಾಮ ಹಿಂದೂ ದೇವರ ನಾಮಾಂಕಿತ ಹೊಂದಿದ್ದರೂ ವಾಸವಾಗಿರುವುದು ಮಾತ್ರ ಮುಸ್ಲಿಂ ಸಮುದಾಯ!. 180 ಕುಟುಂಬ ಹೊಂದಿದ್ದರೂ ಉರ್ದು ಶಾಲೆಯ ಗೋಜಿಗೆ ಹೋಗದೆ ಕನ್ನಡ ಶಾಲಾ ಪ್ರೇಮವನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಹಾಗೂ ಉರ್ದು ಶಾಲೆಗೆ ದಾಖಲಿಸಿದೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾಖಲಿಸಿ ಅಭಿಮಾನ ಮೆರೆದಿದ್ದಾರೆ. ‘ಉಚಿತ ಗುಣಮಟ್ಟದ ಉಚಿತ ಶಿಕ್ಷಣ ಪುಸ್ತಕ ವಿತರಣೆ ಬಿಸಿಯೂಟ ಯೋಜನೆ ಸೇರಿದಂತೆ ಮಕ್ಕಳಿಗೆ ಮೂಲಭೂತ ಸೌಲಭ್ಯ ಇಲ್ಲೇ ಸಿಗುವುದರಿಂದ ಬೇರೆ ಶಿಕ್ಷಣವಾಗಲಿ ಬೇರೆ ಶಾಲೆಯಾಗಲಿ ಅವಶ್ಯಕತೆ ಇಲ್ಲ. ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸುತ್ತಿರುವುದು ಹೆಮ್ಮೆ ಪಡುತ್ತೇವೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಸಿ. ಗೌರ್ ಪೀರ್ ಸಾಬ್. ರಾಮನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜುಲೈ 1 ರ ಸೋಮವಾರ ಎಪಿಜೆ ಅಬ್ದುಲ್ ಕಲಾಂ ಪುತ್ಥಳಿ ಅನಾವರಣ ಹಾಗೂ ಅಡುಗೆ ಕೋಣೆ ಕಾಂಪೌಂಡ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಚುನಾಯಿತ ಜನಪ್ರತಿನಿಧಿಗಳು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT